ನಾಯಂಡಹಳ್ಳಿ ವೃತ್ತದಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರು

ಬೆಂಗಳೂರು,ಫೆ.17-ಮೈಸೂರು ರಸ್ತೆಯ ನಾಯಂಡಹಳ್ಳಿ ವೃತ್ತದಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್‍ವರೆಗಿನ 12 ಕಿ.ಮೀ ಉದ್ದದ ವರ್ತುಲ ರಸ್ತೆಗೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹೆಸರಿಡುವುದು ಖಾತರಿಯಾಗಿದೆ. ಎರಡು ಲೋಕಸಭಾ ಕ್ಷೇತ್ರಗಳು, ಆರು ವಿಧಾನಸಭಾ ಕ್ಷೇತ್ರಗಳು ಹಾಗೂ 14 ಬಿಬಿಎಂಪಿ ವಾರ್ಡ್‍ಗಳಲ್ಲಿ ಹಾದು ಹೋಗುವ ನಾಯಂಡಹಳ್ಳಿ ಜಂಕ್ಷನ್-ಹೊಸಕೆರೆಹಳ್ಳಿ -ದೇವೇಗೌಡ ಪೆಟ್ರೋಲ್ ಬಂಕ್-ಕದಿರೇನಹಳ್ಳಿ ಪಾರ್ಕ್-ಸಾರಕ್ಕಿ ಸಿಗ್ನಲ್ -ಜೆ.ಪಿ.ನಗರದ ಮೂಲಕ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ವೃತ್ತದವರಿಗಿನ ವರ್ತುಲ ರಸ್ತೆ ಇನ್ನು ಮುಂದೆ ಪವರ್‍ ಸ್ಟಾರ್ ಪುನೀತ್ ರಾಜ್‍ಕುಮಾರ್ ರಸ್ತೆಯಾಗಿ […]