ಕಾಂಬೋಡಿಯನ್ ರಾಜನ ನಿವಾಸಕ್ಕೆ ಬೆಂಕಿ

ನಾಮ್ ಪೆನ್,ಮಾ.13- ಪ್ರಸಿದ್ಧ ದೇವಾಲಯದ ಸಂಕೀರ್ಣದ ಸಮೀಪವಿರುವ ಕಾಂಬೋಡಿಯಾದ ರಾಜ ನೊರೊಡೊಮ್ ಸಿಹಾಮೋನಿ ಅವರ ಪ್ರಾಂತೀಯ ನಿವಾಸಕ್ಕೆ ಬೆಂಕಿ ಬಿದ್ದಿದ್ದು, ಆಸ್ತಿ ನಷ್ಟವಾಗಿದೆ. ವಾಯುವ್ಯ ನಗರದ ಸಿಯೆಮ್ ರೀಪ್‍ನಲ್ಲಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಸಂಕೀರ್ಣದಲ್ಲಿನ ಸಣ್ಣ ಕಟ್ಟಡವೊಂದರ ಮೇಲ್ಛಾವಣಿಗೆ ಹಾನಿಯಾಗಿದೆ. 69ರ ಹರೆಯದ ರಾಜ ಸಿಹಾಮೋನಿ ಪ್ರಸ್ತುತ ವೈದ್ಯಕೀಯ ತಪಾಸಣೆಗಾಗಿ ಬೀಜಿಂಗ್‍ನಲ್ಲಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಮಾಹಿತಿ ಸಚಿವ ಖಿಯು ಕನ್ಹರಿತ್ ತಿಳಿಸಿದ್ದಾರೆ. ರಾಜಭವನದ ಸಚಿವಾಲಯದಲ್ಲಿನ ಬೆಂಕಿ ಅನಾವುತಕ್ಕೆ ವಿದ್ಯುತ್ ದೋಷ ಕಾರಣವಾಗಿರಬಹುದು […]
ಮೈಸೂರು ನಗರದಲ್ಲಿ ಚಿರತೆ ಪ್ರತ್ಯಕ್ಷ, ಸಾರ್ವಜನಿಕರಲ್ಲಿ ಆತಂಕ

ಮೈಸೂರು, ಫೆ. 4- ಜಿಲ್ಲೆಯಲ್ಲಿ ಇತ್ತೀಚೆಗೆ ಚಿರತೆ ಹಾವಳಿ ಹೆಚ್ಚುತ್ತಲೇ ಇದ್ದು, ಇದೀಗ ನಗರ ಪ್ರದೇಶದಲ್ಲೂ ಚಿರತೆ ಕಾಣಿಸಿಕೊಂಡಿರುವುದು, ನಗರದ ಜನರ ನಿದ್ದೆಗೆಡಿಸಿದೆ. ಆರ್‍ಟಿ ನಗರದಲ್ಲಿರುವ ಉರುಕಾತೇಶ್ವರಿ ದೇವಸ್ಥಾನ ಬಳಿ ರಾತ್ರಿ ಚಿರತೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮಣ್ಣಿನ ಗುಡ್ಡದ ಹಿಂದೆ ಅವಿತಿದ್ದ ಚಿರತೆ ರಸ್ತೆ ದಾಟುವ ದೃಶ್ಯ ಕಾರಿನಲ್ಲಿ ಸಾಗುತ್ತಿದ್ದವರ ಮೊಬೈಲ್‍ನಲ್ಲಿ ಸೆರೆಯಾಗಿದೆ. ರಸ್ತೆ ದಾಟುತ್ತಿದ್ದ ಚಿರತೆ ದೃಶ್ಯವನ್ನು ವೀಕ್ಷಿಸಿದ ಸ್ಥಳೀಯರು ಇದೀಗ ಭಯಗ್ರಸ್ಥರಾಗಿದ್ದಾರೆ. ಕೇಂದ್ರ ಸರ್ಕಾರ ಎಲ್ಲರ ಜೊತೆ ಜಗಳವಾಡುತ್ತಲೇ […]
ಮೋದಿ ರ‍್ಯಾಲಿ ಮೇಲೆ ಡ್ರೋನ್ ಹಾರಾಟ : ಮೂವರ ಬಂಧನ

ಅಹಮದಾಬಾದ್,ನ.25- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರ‍್ಯಾಲಿ ನಡೆಸಿದ್ದ ಪ್ರದೇಶದಲ್ಲಿ ಕ್ಯಾಮೆರಾ ಅಳವಡಿಸಿದ ಡ್ರೋನ್ ಹಾರಾಟ ನಡೆಸಿದ ಆರೋಪದ ಮೇಲೆ ಮೂವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಮೋದಿ ರ‍್ಯಾಲಿ ನಡೆಸಿದ್ದ ಅಹಮದಾಬಾದ್ ಜಿಲ್ಲೆಯ ಬಾವ್ಲಾ ಗ್ರಾಮದಲ್ಲಿ ಕ್ಯಾಮೆರಾ ಅಳವಡಿಸಿದ ಡ್ರೋನ್ ಹಾರಾಟ ನಡೆಸಿದ ಆರೋಪದ ಮೇಲೆ ಮೂವರನ್ನು ಬಂಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಬಾವ್ಲಾ ಗ್ರಾಮದಲ್ಲಿ ಯಾರು ಡ್ರೋಣ್ ಹಾರಾಟ ನಡೆಸಬಾರದು ಎಂದು ಜಿಲ್ಲಾಧಿಕಾರಿಗಳು ನಿಷೇಧ ವಿದಿಸಿದ್ದರು ಕೆಲವರು ಡ್ರೋನ್ ಹಾರಾಟ […]
ತೈವಾನ್ ಸಮೀಪ ಹಾರಾಡಿದ 36 ಚೀನೀ ಫೈಟರ್ ಜೆಟ್‌ಗಳು

ತೈಪೆ, ತೈವಾನ್ ,ನ.13- ಚೀನಾದ ಸೇನೆಯು ತೈವಾನ್ ಬಳಿ 36 ಫೈಟರ್ ಜೆಟ್‌ಗಳು ಮತ್ತು ಬಾಂಬರ್‌ಗಳನ್ನು ಹಾರಿಸಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯವು ಹೇಳಿದೆ. ಚೀನಾ ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಳ್ಳುವ ಸ್ವಯಂ-ಆಡಳಿತ ದ್ವೀಪ ಪ್ರಜಾಪ್ರಭುತ್ವದ ವಿರುದ್ಧ ದೀರ್ಘಾವಧಿಯ ಬೆದರಿಕೆಯ ಅಭಿಯಾನದ ಭಾಗವಾಗಿದೆ. ಶನಿವಾರದಂದು ಹತ್ತು ವಿಮಾನಗಳು ತೈವಾನ್ ಜಲಸಂಧಿಯಲ್ಲಿನ ಮಧ್ಯದ ರೇಖೆಯ ಉದ್ದಕ್ಕೂ ಹಾರಿದವು, ಅದು ದ್ವೀಪವನ್ನು ಮುಖ್ಯ ಭೂಭಾಗದಿಂದ ಪ್ರತ್ಯೇಕಿಸುತ್ತದೆ ಎಂದು ಸಚಿವಾಲಯ ತಿಳಿಸಿದ್ದು, . ಅವುಗಳಲ್ಲಿ ಆರು ಶೆನ್ಯಾಂಗ್ ಜೆ-11 ಮತ್ತು ನಾಲ್ಕು […]