ಹಿರಿಯ ನಾಯಕರ ಕಡೆಗಣನೆಗೆ ಗುಜರಾತ್ ಸೋಲಿಗೆ ಕಾರಣ : ಮೊಯ್ಲಿ

ಬೆಂಗಳೂರು,ಡಿ.10- ಗುಜರಾತ್‍ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಿದ ಪರಿಣಾಮ ಹೀನಾಯ ಸೋಲುಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪಕ್ಷಕ್ಕೆ ಯಶಸ್ಸು ತಂದುಕೊಟ್ಟವರನ್ನು ಕಡ್ಡಾಯವಾಗಿ ಗೌರವಿಸಬೇಕು. ಹಿಮಾಚಲಪ್ರದೇಶದಲ್ಲಿ ವೀರಭದ್ರ ಸಿಂಗ್ ಪಕ್ಷವನ್ನು ಗೆಲ್ಲಿಸಿದರು. ಅವರ ಬಳಿಕ ಅವರ ಪತ್ನಿ ಪ್ರತಿಭಾ ಸಿಂಗ್‍ರನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಈ ಪ್ರಯೋಗ ಯಶಸ್ವಿಯಾಗಿದೆ. 68 ಕ್ಷೇತ್ರಗಳ ಪೈಕಿ 40ರಲ್ಲಿ ಕಾಂಗ್ರೆಸ್ ಗೆದ್ದು ಹಿಮಾಚಲಪ್ರದೇಶದಲ್ಲಿ ಅಧಿಕಾರ ಹಿಡಿದಿದೆ. ಅದೇ ರೀತಿ ಪರೀಕ್ಷೆ, ಉತ್ತಮ […]