ರಾಷ್ಟ್ರೀಯ ನೂತನ ಶಿಕ್ಷಣ ನೀತಿ ದೇಶದ ಕಲಿಕೆಯ ದಿಕ್ಕನ್ನೆ ಬದಲಿಸಲಿದೆ : ರಾಷ್ಟ್ರಪತಿ
ನವದೆಹಲಿ, ಜ.31- ರಾಷ್ಟ್ರೀಯ ನೂತನ ಶಿಕ್ಷಣ ನೀತಿ ದೇಶದ ಕಲಿಕೆಯ ದಿಕ್ಕನ್ನೆ ಬದಲಾವಣೆ ಮಾಡಲಿದೆ ಎಂದು ಪ್ರತಿಪಾದಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ತಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕೊಂಡಾಡಿದ್ದಾರೆ. ಇಂದಿನಿಂದ ಆರಂಭವಾದ ಬಜೆಟ್ ಅಧಿವೇಶನದ ಮೊದಲ ದಿನ ರಾಜ್ಯಸಭೆ ಮತ್ತು ಲೋಕಸಭೆಗಳನ್ನು ಉದ್ದೇಶಿಸಿ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹಲವು ಸಾಧನೆಗಳನ್ನು ಪ್ರಶಂಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಮುಖವನ್ನೇ ಬದಲಾವಣೆ ಮಾಡಲಿದೆ. ಹತ್ತು ರಾಜ್ಯಗಳ 19 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾದೇಶಿಕ ಭಾಷೆಯಲ್ಲೇ […]