ನೇಪಾಳದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನ, 40ಕ್ಕೂ ಹೆಚ್ಚು ಮಂದಿ ಸಾವು..!

ಕಠ್ಮಂಡು, ಜ.15- ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ ವಿದೇಶಿಗರು ಸೇರಿದಂತೆ 72 ಜನರನ್ನು ಒಳಗೊಂಡಿದ್ದ ವಿಮಾನವೊಂದು ಇಳಿಯುವಾಗ ಅಪಘಾತಕ್ಕೀಡಾಗಿದ್ದು, 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ನೇಪಾಳದ ನಾಗರಿಕ ವಿಮಾನಯಾನ ಪ್ರಾಕಾರದ ಪ್ರಕಾರ, ಯೇತಿ ಏರ್‍ಲೈನ್ಸ್‍ನ 9ಎನ್-ಎಟಿಆರ್ 72 ವಿಮಾನ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:33 ಕ್ಕೆ ಟೇಕಾಫ್ ಆಗಿತ್ತು. ಹಳೆಯ ವಿಮಾನ ನಿಲ್ದಾಣ ಮತ್ತು ಸೇಟಿ ನದಿಯ ದಡದಲ್ಲಿ ನಿರ್ಮಿಸಿರುವ ಹೊಸ ವಿಮಾನ ನಿಲ್ದಾಣದ ನಡುವೆ ಪತನಗೊಂಡಿದೆ.ವಿಮಾನದಲ್ಲಿ […]