ಟೆರರ್ ಫಂಡಿಂಗ್ ಗೆ ಕಡಿವಾಣ ಹಾಕಬೇಕು : ಅಜಿತ್ ದೇವೊಲ್

ನವದೆಹಲಿ,ಡಿ. 6- ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುತ್ತಿರುವುದಕ್ಕೆ ಕಡಿವಾಣ ಹಾಕುವುದು ಆಧ್ಯತೆ ವಿಷಯವಾಗಬೇಕೆಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೇವೊಲ್ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರೀಯ ಏಷ್ಯಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆ ಎಲ್ಲಾ ಸದಸ್ಯ ರಾಷ್ಟ್ರಗಳು ಭಯೋತ್ಪಾದನೆ ಚಟುವಟಿಕೆಗಳಿಗೆ ಮತ್ತು ಅದಕ್ಕೆ ಬೆಂಬಲ ನೀಡುವವರೆಗೆ ನಿಷೇಧ ಹೇರಬೇಕು. ಭಯೋತ್ಪಾದನೆ ಚಟುವಟಿಕೆಗಳನ್ನು ಹತ್ತಿಕ್ಕಬೇಕಾದರೆ ಪ್ರತಿರೋಧದ ಸಂಪ್ರದಾಯಗಳು ಹೆಚ್ಚಾಗಬೇಕು. ಕೇಂದ್ರೀಯ ಏಷ್ಯಾ ರಾಷ್ಟ್ರಗಳು ತನ್ನ ಭಾಗದಲ್ಲಿ ಅತ್ಯುನ್ನತ್ತವಾದ ಆಧ್ಯತೆಗಳನ್ನು ಭಯೋತ್ಪಾದನಾ ಚಟುವಟಿಕೆಗಳ ಮೇಲಿನ ನಿಯಂತ್ರಣಕ್ಕೆ ನೀಡಬೇಕಿದೆ. ನೆರಹೊರೆಯಲ್ಲಿ […]