ಬೆಂಗಳೂರಿನಲ್ಲಿ ಮತ್ತೆ ಜಾರಿಗೆ ಬರಲಿದೆ ಹೊಸ ಜಾಹೀರಾತು ನೀತಿ

ಬೆಂಗಳೂರು,ಫೆ.7- ನಗರದಲ್ಲಿ ಮತ್ತೆ ಜಾಹೀರಾತು ಮಾಫೀಯಾಗೆ ಮಣೆ ಹಾಕಲಾಗುತ್ತಿದೆ. ಖಾಲಿಯಾಗಿರುವ ಖಜಾನೆ ಭರ್ತಿ ಮಾಡಿಕೊಳ್ಳುವ ಉದ್ದೇಶದಿಂದ ಮತ್ತೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಹೊಸ ಜಾಹೀರಾತು ನೀತಿ ಜಾರಿಗೆ ತರಲು ಬಿಬಿಎಂಪಿ ತೀರ್ಮಾನಿಸಿದೆ. ಈ ಹಿಂದೆ ಇದ್ದ ಜಾಹೀರಾತು ನೀತಿಗೆ ತಿದ್ದುಪಡಿ ತಂದು ಹೊಸ ಜಾಹೀರಾತು ಬೈಲಾ ಜಾರಿಗೆ ತರಲು ತೀರ್ಮಾನಿಸಲಾಗಿದ್ದು, ಮುಂಬರುವ ಬಜೆಟ್ ಮಂಡನೆ ವೇಳೆ ಹೊಸ ನಿಯಮ ಜಾರಿಗೆ ತರುವ ಸಾಧ್ಯತೆಗಳಿವೆ. ನಗರದಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ತರಲು ತೀರ್ಮಾನಿಸಿರುವುದನ್ನು ಒಪ್ಪಿಕೊಂಡಿರುವ […]