ರಕೂನ್ ನಾಯಿಗಳಿಂದ ಕೋವಿಡ್ ಹರಡಿರುವ ಸಾಧ್ಯತೆ

ಬೀಜಿಂಗ್,ಮಾ.18- ಮನುಕುಲವನ್ನೇ ಅಪಾಯದಂಚಿಗೆ ನೂಕಿದ್ದ ಕೋವಿಡ್-19 ಸೋಂಕು ಪತ್ತೆಯಾದ ಮೊದಲ ಸ್ಥಳದಲ್ಲಿನ ರಕೂನ್ ನಾಯಿಗಳಲ್ಲಿ ಕೊರೊನಾ ಡಿಎನ್‍ಎ ಪತ್ತೆಯಾಗಿದ್ದು, ಇದರ ಆಧಾರದ ಮೇಲೆ ಚೀನಾ ಮತ್ತೊಂದು ವಾದವನ್ನು ಮುಂದಿಡಲಾರಂಭಿಸಿದೆ. ಕೊರೊನಾ ಸೋಂಕು ಚೀನಾದ ವ್ಯೂಹಾನ್‍ನಲ್ಲಿ ವೈರಾಣು ಸಂಶೋಧನಾ ಕೇಂದ್ರದಿಂದ ಸೋರಿಕೆಯಾಗಿದೆ ಎಂಬ ಆರೋಪಗಳಿವೆ. ಆದರೆ ಹೊಸ ಜಿನೆಟಿಕ್ ಮೆಟಿರಿಲ್‍ನ ಅಂಶಗಳು ಕೋವಿಡ್-19 ಸೋಂಕು ಪ್ರಾಣಿ ಜನ್ಯವಾಗಿರಬಹುದು ಎಂಬುದಕ್ಕೆ ಅಸ್ಪಷ್ಟ ಪುರಾವೆಯಾಗಿದೆ ಎಂದು ಅಂತರಾಷ್ಟ್ರೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇಡೀ ವಿಶ್ವವನ್ನೇ ನಲುಗಿಸಿದ ಕೋವಿಡ್-19 ರೋಗಾಣುವಿನ ಮೂಲ ಪತ್ತೆ […]