ಕೃಷಿ ಸಮಸ್ಯೆಗಳಿಗೆ ನೂತನ ಸಂಶೋಧನೆ ಆಗಲಿ : CM ಬೊಮ್ಮಾಯಿ

ಬೆಂಗಳೂರು,ಜ.20-ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳಿಗೆ ಕೃಷಿ ವಿಶ್ವವಿದ್ಯಾಲಯಗಳು ಹೊಸ ಹೊಸ ಸಂಶೋಧನೆಗಳ ಮೂಲಕ ಪರಿಹಾರವನ್ನು ಕಂಡು ಹಿಡಿಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅರಮನೆ ಮೈದಾನದಲ್ಲಿಂದು ಆರಂಭವಾದ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೃಷಿ ಕ್ಷೇತ್ರದ ಬದಲಾವಣೆಗೆ ಭಾರತವನ್ನು ಸನ್ನದ್ದುಗೊಳಿಸುವ ನಿಟ್ಟಿನಲ್ಲಿ ಕೃಷಿ ವಿವಿಗಳ ಪಾತ್ರ ದೊಡ್ಡದಿದೆ. ಹಳೆಯ ಸಂಶೋಧನಾ ಮಾದರಿಯನ್ನು ಬಿಟ್ಟು ಅತಿಯಾದ ನೀರಿನ ಬಳಕೆ, ಹವಾಮಾನ ವೈಪರೀತ್ಯ, ರಾಸಾಯಾನಿಕ ಬಳಕೆಯ ದುಷ್ಪರಿಣಾಮ ಮೊದಲಾದ ವಿಚಾರಗಳು ಹಾಗೂ ಸವಾಲುಗಳ […]