ಹೊಸ ವರ್ಷದ ಪಾರ್ಟಿ ವೇಳೆ ಯುವಕನ ಕೊಲೆ

ಚಿಕ್ಕಬಳ್ಳಾಪುರ,ಜ.1- ಹೊಸ ವರ್ಷ ಸಂಭ್ರಮದ ಪಾರ್ಟಿ ವೇಳೆ ಸ್ನೇಹಿತರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಚಿಂತಾಮಣಿಯ ಐಮರೆಡ್ಡಿಹಳ್ಳಿ ನಿವಾಸಿ ನವೀನ್ ರೆಡ್ಡಿ (28) ಕೊಲೆಯಾದ ಯುವಕ. 2023ನೇ ನೂತನ ವರ್ಷದ ಸಂಭ್ರಮಾಚರಣೆಗಾಗಿ ಸ್ನೇಹಿತರಾದ ದೊಡ್ಡ ಗಂಜೂರು ಗ್ರಾಮದ ನವೀನ್ ರೆಡ್ಡಿ, ಬೈರೆಡ್ಡಿ, ಪುನೀತ್, ಕಿರಣ್ ಜೊತೆಗೂಡಿ ಪಾರ್ಟಿ ಮಾಡಲು ಐಮಾರೆಡ್ಡಿ ಹಳ್ಳಿ ಸಮೀಪದ ಡಾಬಾಕ್ಕೆ […]