ನ್ಯೂಜಿಲ್ಯಾಂಡ್‍ನಲ್ಲಿ ಕೊರೊನಾ ಅಬ್ಬ, ಪ್ರಧಾನಿ ಮದುವೆ ಮುಂದೂಡಿಕೆ

ವೆಲ್ಲಿಂಗ್ಟನ್, ಜ.23- ನ್ಯೂಜಿಲೆಂಡ್ ಪ್ರಧಾನಿ ಜೆಸಿಂದಾ ಆರ್ಡೆನ್ ಅವರು ದೀರ್ಘಕಾಲಿಕ ಗೆಳೆಯ ಕ್ಲಾರ್ಕ್ ಗ್ಯಾರಿಫೋರ್ಡ್ ಅವರೊಂದಿಗೆ ತಮ್ಮ ವಿವಾಹ ರದ್ದುಪಡಿಸಿದ್ದಾರೆ.ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಸೋಂಕು ಸಮುದಾಯಕ್ಕೆ ಹರಡುವುದನ್ನು ತಪ್ಪಿಸಲುರಾಷ್ಟ್ರವು ಹೊಸ ನಿರ್ಬಂಧಗಳನ್ನು ವಿಸಿರುವ ಹಿನ್ನೆಲೆಯಲ್ಲಿ ವಿವಾಹವಾಗಿ ಸಂತೋಷವಾಗಿರುವುದು ತರವಲ್ಲ ಎಂಬ ಕಾರಣಕ್ಕೆ ಅವರು ವಿವಾಹ ಮಹೋತ್ಸವವನ್ನು ರದ್ದುಮಾಡಿದ್ದಾರೆ. ವಿವಾಹವೊಂದರ ಬಳಿಕ ಉತ್ತರದಿಂದ ದಕ್ಷಿಣ ದ್ವೀಪಗಳುದ್ದಕ್ಕೂ ಒಂಬತ್ತು ಕೋವಿಡ್-19 ಓಮಿಕ್ರಾನ್ ಪ್ರಕರಣಗಳು ಕಂಡುಬಂದಿದ್ದು, ಸಮುದಾಯಕ್ಕೆ ಹರಡುತ್ತಿರುವ ಲಕ್ಷಣಗಳು ಗೋಚರಿಸಿವೆ. ಈ ಕಾರಣದಿಂದ ನ್ಯೂಜಿಲೆಂಡ್ ಭಾನುವಾರ ಮಧ್ಯರಾತ್ರಿಯಿಂದ ಮಾಸ್ಕ್‍ಧಾರಣೆ […]