ನೈಟ್‍ ಕರ್ಫ್ಯೂ ಉಲ್ಲಂಘಿಸಿದ 10 ವಾಹನ ವಶ

ಬೆಂಗಳೂರು, ಜ.6- ವೀಕೆಂಡ್ ಕಫ್ರ್ಯೂ ಹತ್ತಿರವಾಗುತ್ತಿದ್ದಂತೆ ನಗರದಲ್ಲಿ ನೈಟ್‍ಕಫ್ರ್ಯೂವನ್ನು ಪೊಲೀಸರು ಮತ್ತಷ್ಟು ಬಿಗಿ ಗೊಳಿಸಿದ್ದು, ನಿನ್ನೆ ರಾತ್ರಿ 10 ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ. ನೈಟ್‍ಕಫ್ರ್ಯೂ ಸಂದರ್ಭದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ 9 ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರದ ಒಂದು ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜ.28 ರಿಂದ ಕಟ್ಟುನಿಟ್ಟಾಗಿ ನೈಟ್‍ಕಫ್ರ್ಯೂ ಜಾರಿಮಾಡಿದ್ದರೂ ಸಹ ಸವಾರರು ನಿಯಮ ಉಲ್ಲಂಘಿಸಿ ವಾಹನಗಳಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದುದನ್ನು ಪತ್ತೆಹಚ್ಚಿ ಇದುವರೆಗೂ 371 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳಲ್ಲಿ ದ್ವಿಚಕ್ರ ವಾಹನ […]

ಇಂದಿನಿಂದ ರಾಜ್ಯಾದ್ಯಂತ ಹೊಸ ಮಾರ್ಗಸೂಚಿ ಜಾರಿ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಬೆಂಗಳೂರು,ಜ.6- ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಜಾರಿ ಮಾಡಿರುವ ಹೊಸ ಮಾರ್ಗಸೂಚಿ ಇಂದಿನಿಂದ ರಾಜ್ಯಾದ್ಯಂತ ಜಾರಿಯಾಗಲಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಂತೆ ನಾಳೆ ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೂ ನೈಟ್ ಕಫ್ರ್ಯೂ ಜಾರಿಯಾಗಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಹಾಲು, ಹಣ್ಣು, ತರಕಾರಿ, ದಿನಸಿ ಅಂಗಡಿಗಳು, ಔಷಧಿ ಅಂಗಡಿಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಉಳಿದಂತೆ ಬಹುತೇಕ ಚಟುವಟಿಕೆಗಳು ಸ್ತಬ್ಧಗೊಳ್ಳಲಿವೆ. ಖಾಸಗಿ ಹಾಗೂ […]

ನೈಟ್ ಕಫ್ರ್ಯೂ ಮುಂದುವರೆಯಲಿದೆ, ಶಾಲಾ -ಕಾಲೇಜು ಬಂದ್ ಅಗತ್ಯ: ಗೃಹ ಸಚಿವ

ಚಿಕ್ಕಮಗಳೂರು,ಜ.3-ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕಫ್ರ್ಯೂವನ್ನು ಮುಂದುವರೆ ಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾತ್ರಿ ಕಫ್ರ್ಯೂವನ್ನು ಜಾರಿಗೊಳಿಸಲಾಗುತ್ತಿದೆ. ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಮತ್ತಷ್ಟು ದಿನ ರಾತ್ರಿ ಕಫ್ರ್ಯೂ ಮುಂದುವರೆಯಲಿದೆ. ಸರ್ಕಾರದ ಜತೆ ಸಾರ್ವಜನಿಕರು ಕೈ ಜೋಡಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ ಲಾಕ್‍ಡೌನ್ ಅನಿವಾರ್ಯವಾಗಬಹುದು ಎಂದರು. ಸದ್ಯಕ್ಕೆ ಲಾಕ್‍ಡೌನ್ ಮಾಡುವ ಉದ್ದೇಶ ಇಲ್ಲ. ಅನಿವಾರ್ಯವಾದರೆ ಮಾಡಬೇಕಾಗಬಹುದು. ಜನರ ಜೀವ ಉಳಿಸಲು […]

ಮದ್ಯಪ್ರಿಯರಿಗೆ ಕಾಡದ ನೈಟ್‍ಕಫ್ರ್ಯೂ: ಕಳೆದ ವರ್ಷಕ್ಕಿಂತಲೂ ಅಧಿಕ ಮದ್ಯ ಮಾರಾಟ

ಬೆಂಗಳೂರು,ಜ.2- ನೈಟ್ ಕಫ್ರ್ಯೂ ಜಾರಿ, ಪೊಲೀಸರ ವಿಶೇಷ ನಿಗಾದ ನಡುವೆಯೂ ಮದ್ಯ ಮಾರಾಟದಲ್ಲಿ ಗ್ರಾಹಕರು ಕಳೆದ ಬಾರಿಯ ದಾಖಲೆಯನ್ನು ಮುರಿದಿದ್ದಾರೆ. ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮದ್ಯ ಬಾಕ್ಸ್ ಮಾರಾಟ ಹಾಗೂ ಆದಾಯ ಸಂಗ್ರಹದಲ್ಲಿ ಸಾಕಷ್ಟು ವೃದ್ಧಿಯಾಗಿದೆ. ಕಳೆದ ವರ್ಷ ಡಿಸೆಂಬರ್ 31ರಂದು 2.25 ಲಕ್ಷ ಕಾರ್ಟನ್ ಬಾಕ್ಸ್‍ಗಳಲ್ಲಿ ಭಾರತೀಯ ನಿರ್ಮಿತ ಮದ್ಯ ಮಾರಾಟವಾಗಿದ್ದರೆ, ಈ ಬಾರಿ ಅದು 2.39 ಲಕ್ಷ ಪೆಟ್ಟಿಗೆಗಳಿಗೆ ಏರಿದೆ. ಕಳೆದ ಮೂರು ವರ್ಷಗಳ ಹಿನ್ನೆಲೆ ಗಮನಿಸಿದಾಗ ನಿನ್ನೆಯ ಮಾರಾಟ ಕೊಂಚ […]

ಹೊಸ ವರ್ಷಾಚರಣೆ : ನಿಯಮ ಮೀರಿದ 31 ವಾಹನಗಳ ಜಪ್ತಿ

ಬೆಂಗಳೂರು, ಜ.1- ಕೋವಿಡ್ ಸೋಂಕಿನ ಆತಂಕದ ನಡುವೆಯೂ ಪೊಲೀಸರು ತೆಗೆದುಕೊಂಡ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳಿಂದ ಹೊಸ ವರ್ಷದ ಸಂಭ್ರಮ ಯಾವುದೇ ಅಹಿತಕರ ಘಟನೆಗಳಿಲ್ಲದೆ, ಸರಳ-ಸುಖಾಂತ್ಯವಾಗಿ ನಡೆದಿದೆ. ಈ ನಡುವೆ ನೈಟ್ ಕಫ್ರ್ಯೂ ನಿಯಮ ಉಲ್ಲಂಘಿಸಿದ ವಾಹನಗಳ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ನಿನ್ನೆ 31 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈವರೆಗೂ ಒಟ್ಟು 318 ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಶುಕ್ರವಾರ ರಾತ್ರಿ ನೈಟ್ ಕಫ್ರ್ಯೂ ಉಲ್ಲಂಘಿಸಿದ 26 ದ್ವಿಚಕ್ರ ವಾಹನಗಳು, ಐದು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಈವೆರೆಗೂ ಈಶಾನ್ಯ […]

ರಾತ್ರಿ ಕಪ್ರ್ಯೂ ನಡುವೆಯೇ ತೋಟದ ಮನೆಗಳಲ್ಲಿ ವರ್ಷಾಚರಣೆ ಜೋರು

ದಾವಣಗೆರೆ, ಜ.1- ರಾತ್ರಿ ಕಪ್ರ್ಯೂ ನಡುವೆಯೇ ಜಿಲ್ಲಾಯಲ್ಲಿ ಹೊಸ ವರ್ಷವನ್ನು ಜನರು ಸಂಭ್ರಮದಿಂದ ಸ್ವಾಗತಿಸಿದರು. ಕೊರೊನಾ ಕಾರಣ ಡಿಜೆ ಸೌಂಡ್ ಅಬ್ಬರ, ವೇದಿಕೆ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರಿಂದ ಜಿಲ್ಲಾಯ ಹೋಟೆಲ್‍ಗಳು, ಬಾರ್ ಮತ್ತು ರೆಸ್ಟೋರಂಟ್‍ಗಳು , ರೆಸಾರ್ಟ್‍ಗಳು, ಕ್ಲಬ್‍ಗಳು ಜನರಿಲ್ಲದೆ ಬಣಗುಡುತ್ತಿದ್ದವು. ಆದರೆ, ಪಾರ್ಸಲ್‍ಗಳ ವ್ಯಾಪಾರ ಜೋರಾಗಿತ್ತು. ನಾನ್‍ವೆಜ್ ಹೊಟೇಲ್‍ಗಳಲ್ಲಿ ವ್ಯಾಪಾರ ಇನ್ನಷ್ಟು ಹೆಚ್ಚಾಗಿತ್ತು. ಬಹುತೇಕ ಮಂದಿ ಮನೆ ಮುಂದೆ ತೋಟದ ಮನೆ, ಜಮೀನುಗಳಲ್ಲಿ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಆಚರಿಸಿದರು. ಪೊಲೀಸರು ರಾತ್ರಿ 8 […]