ನೈಟ್ ಕರ್ಫ್ಯೂ-ವೀಕೆಂಡ್ ಕರ್ಫ್ಯೂಗೆ ಉದ್ಯಮಿಗಳಿಂದ ಭಾರೀ ವಿರೋಧ

ಬೆಂಗಳೂರು, ಜ.18- ಸರ್ಕಾರದ ನೈಟ್‍ ಕರ್ಫ್ಯೂ ಮತ್ತು ವೀಕೆಂಡ್ಗೆಕರ್ಫ್ಯೂಗೆ  ಭಾರೀ ವಿರೋಧ ವ್ಯಕ್ತವಾಗಿದೆ. ಹೊಟೇಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಹಾಗೂ ಮದುವೆ ಮಂಟಪಗಳ ಮಾಲೀಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ವ್ಯಾಪಾರ-ವಹಿವಾಟು ನಡೆಸಲು ಅನುವು ಮಾಡಿಕೊಡುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ವೀಕೆಂಡ್ ಕರ್ಫ್ಯೂ  ಅವಧಿಯನ್ನು ಜ.31ರ ವರೆಗೆ ವಿಸ್ತರಿಸಲು ತೀರ್ಮಾನಿಸಿರುವ ಬೆನ್ನಲ್ಲೇ ರಾಜ್ಯ ಹೊಟೇಲ್ ಮಾಲೀಕರ ಸಂಘ, ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘ, ಕರವೇ ಹೊಟೇಲ್ ಉದ್ದಿಮೆದಾರರ ಸಂಘ, […]