ವ್ಯಾನ್‍ಗೆ ಡಿಕ್ಕಿ ಹೊಡೆದ ಟ್ರಕ್, ಒಂಬತ್ತು ಮಂದಿ ಸಾವು

ಮುಂಬೈ, ಜ.19 -ರಾಯಗಢ ಜಿಲ್ಲೆಯ ಮುಂಬೈ-ಗೋವಾ ಹೆದ್ದಾರಿಯಲ್ಲಿ ಇಂದು ಮುಂಜಾನೆ ವೇಗವಾಗಿ ಬಂದ ಲಾರಿಯೊಂದು ಮುಂದೆ ಹೋಗುತ್ತಿದ್ದ ವ್ಯಾನ್‍ಗೆ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಮುಂಬೈನಿಂದ 130 ಕಿ.ಮೀ ದೂರದಲ್ಲಿರುವ ರೆಪೋಲಿ ಗ್ರಾಮದ ಬಳಿ ಮುಂಜಾನೆ 4.45ಕ್ಕೆ ಅಪಘಾತ ಸಂಭವಿಸಿದೆ. ಮೃತಪಟ್ಟ ಎಲ್ಲರೂ ಸಂಬಂಕರಾಗಿದ್ದು ವ್ಯಾನ್‍ನಲ್ಲಿ ರತ್ನಗಿರಿ ಜಿಲ್ಲೆಯ ಗುಹಾಗರ್‍ಗೆ ಹೋಗುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘಗೆರ್ ತಿಳಿಸಿದ್ದಾರೆ. ಮೃತರಲ್ಲಿ ಒಂದು ಹೆಣ್ಣು ಮಗು, ಮೂವರು ಮಹಿಳೆಯರು ಮತ್ತು ಐದು ಪುರುಷರು ಸೇರಿದ್ದಾರೆ […]

ಭಾರೀ ಮಳೆಯಿಂದ ಸೇನಾ ಆವರಣದ ಗೋಡೆ ಕುಸಿದು 9 ಮಂದಿ ಸಾವು

ಲಕ್ನೋ, ಸೆ- ಭಾರೀ ಮಳೆಯಿಂದಾಗಿ ಸೇನಾ ಆವರಣದ ಗಡಿ ಗೋಡೆ ಕುಸಿದು ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಲಕ್ನೋ ಹೊರ ಪ್ರದೇಶದಲ್ಲಿ ನಡೆದಿದೆ. ದಿಲ್ಕುಶಾ ಬಳಿ ಭಾರತೀಯಸೇನಾ ಪಡೆಯ ಪ್ರದೇಶವಿದ್ದು ಸುತ್ತಲು ಭದ್ದತೆಗಾಗಿ ದೊಡ್ಡಗೋಡೆ ಕಟ್ಟಲಾಗಿದೆ. ಇತ್ತೀಚೆಗೆ ಕೆಲವು ಕಾರ್ಮಿಕರು ಗುಡಿಸಲು ಕಟ್ಟಿಕೊಂಡುವಾಸಿಸುತ್ತಿದ್ದರು. ಕಳೆದ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಹೊರಭಾಗದ ಗೋಡೆ ಗುಡಿಸಲ ಮೇಲೆ ಕುಸಿದಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪಿಯೂಷ್ ಮೊರ್ಡಿಯಾ ತಿಳಿಸಿದ್ದಾರೆ. ಸುಮಾರು 15 ಮಂದಿ ಇಲ್ಲಿ ವಾಸವಿದ್ದರೆನ್ನಲಾಗಿದೆ […]

ಉಗ್ರರಿಂದ ಗ್ರೆನೇಡ್ ದಾಳಿ, 9 ಮಂದಿಗೆ ಗಾಯ

ಶ್ರೀನಗರ,ಆ.22- ಶ್ರೀನಗರದ ನಿಶಾತ್ ಹೊರವಲಯದಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ದಾಲ್ ಸರೋವರದ ದಡದಲ್ಲಿರುವ ಸುಪ್ರಸಿದ್ಧ ಮೊಘಲ್ ಉದ್ಯಾನದ ಮುಂಭಾಗದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಗಾಯಗೊಂಡವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿದ್ದು, ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ಕಾಶ್ಮೀರ ಪ್ರಾಂತ್ಯದ ಟ್ರಾಲ್‍ನ ಬೀಹ್‍ಗುಂಡ್ ಭಾಗದಲ್ಲಿ ಭದ್ರತಾ ಅಧಿಕಾರಿಗಳು 10 ರಿಂದ 12 […]

ಮೃತರ ಹೆಸರಿನಲ್ಲಿ ಜಾಬ್ ಕಾರ್ಡ್ ಸೃಷ್ಠಸಿ ಲಕ್ಷಾಂತರ ರೂ. ವಂಚನೆ

ನುಹ್ (ಹರಿಯಾಣ), ಆಗಸ್ಟ್- 3 – ರಾಜ್ಯದ ನುಹ್ ಜಿಲ್ಲೇಯಲ್ಲಿ ಮೃತರ ಹೆಸರನ್ನು ಸೇರಿಸಿ ಜಾಬ್ ಕಾರ್ಡ್‍ಗಳನ್ನು ಸೃಷ್ಠಸಿಮನರೇಗಾ ಯೋಜನೆಯಡಿಯಲ್ಲಿ ಲಕ್ಷಾಂತರ ರೂ ದೂಚುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪಂಚಾಯತ್ ಮತ್ತು ನೀರಾವರಿ ಇಲಾಖೆಯ ನೌಕರರು ಮತ್ತು ಇಬ್ಬರು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಒಂಬತ್ತು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಥಳೀಯ ಗ್ರಾಮಸ್ಥ ಸುಖ್ಬೀರ್ ಸಿಂಗ್ ಅವರು ಸರ್ಕಾರದ ಸಾರ್ವಜನಿಕ ಕುಂದುಕೊರತೆಗಳು ಮತ್ತು ಹರಿಯಾಣ ಸಿಎಂ ವಿಂಡೋ ಪೋರ್ಟರ್‍ಗೆ ದೂರು ಸಲ್ಲಿಸಿದ್ದರು, ಸುಮಾರು ಎರಡು-ಮೂರು […]