“ಕೊರೋನಾ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುವುದರಲ್ಲಿ ಯಾವುದೇ ಅರ್ಥವಿಲ್ಲ”

ಬೆಂಗಳೂರು, ಜ.21- ಬಾರು, ಪಬ್, ಮದುವೆ ಕಲ್ಯಾಣ ಮಂಟಪಗಳನ್ನು ತೆರೆದಿಟ್ಟು, ಶಾಲೆಗಳನ್ನು ಮಾತ್ರ ಮುಚ್ಚುವುದು ಸರಿಯಾದ ಕ್ರಮವಲ್ಲ. ಕೂಡಲೇ ಶಾಲೆಗಳನ್ನು ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಒತ್ತಾಯಿಸಿದ್ದಾರೆ.ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಸಾಂಕ್ರಾಮಿಕ ರೋಗದ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾವುದೇ ರೀತಿಯ ಸಮರ್ಥನೆ ಮಕ್ಕಳ ಹಿತಾಸಕ್ತಿಗೆ ಮಾರಕವಾಗಿದೆ. ಎಷ್ಟೇ ಹೊಸ ಅಲೆಗಳು ಬಂದರೂ ಶಾಲೆಗಳನ್ನು ಮುಚ್ಚುವುದು ಕೊನೆಯ ಅಸ್ತ್ರವಾಗಬೇಕು ಹಾಗು ಶಾಲೆಗಳನ್ನು ತೆಗೆಯುವುದು ಮೊದಲ ಆದ್ಯತೆಯಾಗಬೇಕು. ಎಲ್ಲಾ […]