ಉತ್ತಮ ಜೀವನ ನಡೆಸಲು ಸರಳ ಸೂತ್ರಗಳನ್ನು ಹೇಳಿದ ನಿರ್ಮಲಾನಂದನಾಥ ಶ್ರೀಗಳು

ಬೆಂಗಳೂರು, ಡಿ.5- ದೇಹಕ್ಕೆ ತನ್ನದೇ ಆದ ಇತಿಮಿತಿ ಇರುತ್ತದೆ. ಆದರೆ, ಅದರ ಶೃಂಗಾರ ಮತ್ತು ಪೋಷಣೆಗೆ ಹೆಚ್ಚು ಗಮನ ಹರಿಸಲಾಗುತ್ತದೆ. ಆದರೆ, ಅದೇ ರೀತಿ ಮನಸ್ಸಿನಲ್ಲೂ ಒಳ್ಳೆಯ ಸಂಸ್ಕಾರ ಬೆಳೆಸಿಕೊಂಡರೆ ದೈವಸ್ವರೂಪಿಗಳಾಗಿ ಬದುಕಬಹುದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ರಾಜ್ಯ ಒಕ್ಕಲಿಗರ ಮಹಾಸಭಾದ ವತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರ್ನಲ್ಲಿ ಹನುಮ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಶಿವದೂತೆ ಗುಳಿಗೆ ನಾಟಕ ವೀಕ್ಷಿಸಿ ಮೆಚ್ಚುಗೆ […]