8ನೇ ಬಾರಿಗೆ ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ, ತೇಜೆಸ್ವಿ ಯಾದವ್ ಡಿಸಿಎಂ

ಪಾಟ್ನಾ,ಆ.10- ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿ ಮುರಿದು ಕೊಂಡು ಮಹಾಘಟ್ ಬಂಧನ್ ಜೊತೆ ಸೇರಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಎಂಟನೆ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದು, ಆರ್‍ಜೆಡಿ ನಾಯಕ ತೇಜೆಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ನಿನ್ನೆಯಷ್ಟೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್ ಅವರು, ಬೆನ್ನ ಹಿಂದೆಯೇ ಸರ್ಕಾರ ರಚನೆಗೆ 164 ಶಾಸಕರ ಸಂಖ್ಯಾ ಬಲದೊಂದಿಗೆ ರಾಜ್ಯಪಾಲ ಫಗು ಚಹ್ವಾಣ್ ನಿತೀಶ್ ಕುಮಾರ್ ಅವರ ಬಳಿ ಹಕ್ಕು ಪ್ರತಿಪಾದಿಸಿದರು. ಹಲವು ವಿದ್ಯಮಾನಗಳಿಂದ […]