ನಕಲಿ NOC ಸೃಷ್ಟಿಸಿ ಭಾರೀ ವಂಚನೆ, 90 ಲಕ್ಷ ಮೌಲ್ಯದ ಕಾರುಗಳ ವಶ

ಬೆಂಗಳೂರು,ಡಿ.23- ಕಾರುಗಳಿಗೆ ಸಾಲ ನೀಡಿದ್ದ ಬ್ಯಾಂಕ್ ಮತ್ತು ಫೈನಾನ್ಸ್ಗಳ ನಕಲಿ ಎನ್ಒಸಿಗಳನ್ನು ಸೃಷ್ಟಿಸಿ ಸೆಕೆಂಡ್ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವನ್ನು ಬನಶಂಕರಿ ಠಾಣೆ ಪೊಲೀಸರು ಪತ್ತೆಹಚ್ಚಿ ಮೂವರನ್ನು ಬಂಧಿಸಿ 90 ಲಕ್ಷ ಮೌಲ್ಯದ ಏಳು ಕಾರು ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಭಾಕರ(40), ಪ್ರಕಾಶ್ ಅಲಿಯಾಸ್ ಚೀಟಿ ಪ್ರಕಾಶ(33) ಮತ್ತು ಕಿರಣ್ (44) ಬಂಧಿತ ವಂಚಕರು. ಆರೋಪಿಗಳಿಂದ 90 ಲಕ್ಷ ರೂ. ಬೆಲೆಬಾಳುವ ಮಾರುತಿ ಸುಜುಕಿ ಸಿಯಾಜ್ ಕಾರು, ಟಯೋಟೊ ಫಾರ್ಚುನರ್, ಟೊಯೊಟೊ ಇನ್ನೋವಾ ಕ್ರಿಸ್ಟಾ, ಟೆಂಪೊ ಟ್ರಾವೆಲ್ಲರ್, […]