ಆಕೆ ನನ್ನ ಸಹೋದರಿ ಇದ್ದಂತೆ : ಶ್ರೀಕಾಂತ್ ತ್ಯಾಗಿ

ನವದೆಹಲಿ, ಆ.10- ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಹೈಡ್ರಾಮಾ ಸೃಷ್ಟಿಯಾದ ಬಳಿಕ ಬಂಧನಕ್ಕೆ ಒಳಗಾಗಿರುವ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ, ಘಟನೆ ಕುರಿತು ಕ್ಷಮೆಯಾಚಿಸಿದ್ದು, ತೊಂದರೆಗೆ ಒಳಗಾದ ಮಹಿಳೆ ತನ್ನ ಸಹೋದರಿ ಇದ್ದಂತೆ ಎಂದಿದ್ದಾನೆ. ಆಗಸ್ಟ್ 5ರಂದು ಉತ್ತರ ಪ್ರದೇಶದ ನೋಯಿಡಾದ ಗ್ರಾಂಡ್ ಒಮೆಕ್ಸ್ ಹೌಸಿಂಗ್ ಸೊಸೈಟಿಯ ಸೆಕ್ಷರ್ 93ಬಿರಲ್ಲಿ ಸ್ಥಳೀಯ ಮಹಿಳೆಯಿಂದಿಗೆ ಅನುಚಿತವಾಗಿ ವರ್ತಿಸಿದ್ದರು. ಸೊಸೈಟಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಕ್ಕೆ ತಕರಾರು ವ್ಯಕ್ತವಾದಾಗ ಶ್ರೀಕಾಂತ್ ತ್ಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಅಸಭ್ಯ ಭಾಷೆ ಬಳಸಿದ್ದರು. ಈ ಕುರಿತ […]