ವಿಶ್ವಬ್ಯಾಂಕ್ ಮುಖ್ಯಸ್ಥ ಬಂಗಾ ನೇಮಕಕ್ಕೆ ಜಾಗತೀಕ ಮನ್ನಣೆ

ವಾಷಿಂಗ್ಟನ್,ಫೆ.24-ವಿಶ್ವಬ್ಯಾಂಕ್ ಮುನ್ನಡೆಸುವ ಹೊಣೆ ಹೊತ್ತಿರುವ ಭಾರತೀಯ ಮೂಲದ ಅಜಯ್ ಬಂಗಾ ಅವರಿಗೆ ಜಾಗತೀಕ ಪ್ರಶಂಸೆ ವ್ಯಕ್ತವಾಗಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಬಂಗಾ ಅವರನ್ನು ವಿಶ್ವಬ್ಯಾಂಕ್ ಮುಖ್ಯಸ್ಥರನ್ನಾಗಿ ಘೋಷಣೆ ಮಾಡುತ್ತಿದ್ದಂತೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯಸ್ಥೆ ಜಾರ್ಜೀವಾ ಸೇರಿದಂತೆ ವಿಶ್ವದ ಹಲವಾರು ಗಣ್ಯರು ಬಂಗಾ ಅವರ ನೇಮಕವನ್ನು ಸ್ವಾಗತಿಸಿದ್ದಾರೆ. ಟ್ವಿಟರ್‍ನಲ್ಲಿ ಬಂಗಾ ಅವರ ಫೋಟೋ ಶೇರ್ ಮಾಡಿರುವ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಅವರು ಸುಸ್ಥಿರ ಅಭಿವೃದ್ಧಿ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವ ಬಂಗಾ ಅವರ […]