ಚೀನಾದಲ್ಲಿ ಸ್ಫೋಟ : 2 ಸಾವು, 12 ಕಾರ್ಮಿಕರು ನಾಪತ್ತೆ

ಬೀಜಿಂಗ್, ಜ.16 – ಈಶಾನ್ಯ ಚೀನಾದ ರಾಸಾಯನಿಕ ಘಟಕದಲ್ಲಿ ಸಂಭವಿಸಿದ ಭಾರೀ ಸ್ಪೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ನಾಪತ್ತೆಯಾಗಿದ್ದಾರೆ. ರಾಜಧಾನಿ ಬೀಜಿಂಗ್‍ನ ಪೂರ್ವದಲ್ಲಿರುವ ಲಿಯಾನಿಂಗ್ ಪ್ರಾಂತ್ಯದ ಪಂಜಿನ್ ನಗರದ ಹೊರವಲಯದಲ್ಲಿ ಕಳೆದ ರಾತ್ರಿ ಈ ದುರಂತ ಸಂಭವಿಸಿದ್ದು ಘಟನೆಯಲ್ಲಿ 34 ಜನರು ಗಾಯಗೊಂಡಿದ್ದಾರೆ. ರಾಸಾಯನಿಕ ಸಂಸ್ಕರಣಾ ಯಂತ್ರಗಳು, ಪೈಪ್‍ಗಳು ಮತ್ತು ಶೇಖರಣಾ ಪಾತ್ರೆಗಳ ಸಂಕೀರ್ಣದಿಂದ ಬೆಂಕಿ ಜ್ವಾಲೆಗಳು ಮತ್ತು ದಟ್ಟವಾದ ಕಪ್ಪು ಹೊಗೆ ಏರುತ್ತಿರುವುದನ್ನು ಸ್ಥಳೀಯ ಆಡಳಿತ ಛಾಯಾಚಿತ್ರ ಬಿಡುಗಡೆ ಮಾಡಿದೆ. ನೇಪಾಳದಲ್ಲಿ […]