ಮತ್ತೊಂದು ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ ‘ಕಿರಿಕ್’ ಕೊರಿಯಾ

ಸಿಯೋಲ್,ಫೆ.27-ಉಕ್ರೇನ್‍ನ ಯುದ್ಧ ಸನ್ನಿವೇಶ ಹಾಗೂ ಚೀನಾದ ಚಳಿಗಾಲದ ಒಲಿಂಪಿಕ್ಸ್ ಸಮೀಪಿಸುತ್ತಿರುವ ನಡುವೆ ಉತ್ತರ ಕೊರಿಯಾ ಮತ್ತೊಂದು ಖಂಡಾಂತರ ಕ್ಷಿಪಣಿಯನ್ನು ಉಡಾವಣೆ ಮಾಡಿ ಆತಂಕ ಮೂಡಿಸಿದೆ.ಇಂದು ಮುಂಜಾನೆ 7.52ರ ಸ್ಥಳೀಯ ಕಾಲಮಾನದ ಪ್ರಕಾರ ಪೊಂಗ್ಯಾಂಗ್‍ನಿಂದ ಜಪಾನ್ ಸಮುದ್ರದ ಕಡೆಗೆ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ಹಾರಿಸಿರುವುದಾಗಿ ಉತ್ತರ ಕೊರಿಯಾದ ಸೇನೆ ತಿಳಿಸಿದೆ. ಇದರ ಸಾಮಥ್ರ್ಯ 300 ಕಿ.ಮೀ ಕ್ರಮಿಸಲಿದ್ದು, 620 ಕಿ.ಮೀ ಎತ್ತರಕ್ಕೆ ಚಿಮ್ಮಲಿದೆ. ಕ್ಷಿಪಣಿಯ ಈ ವಿಶ್ಲೇಷಣೆಯನ್ನು ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿದ್ದು, ಜಪಾನ್ ಸಹಮತ […]