ಮತ್ತೊಂದು ಪವರ್‌ಫುಲ್ ಕ್ಷಿಪಣಿಯ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

ಸಿಯೋಲ್, ಜ.31- ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾವಣೆ ಮಾಡಲಾಗಿದೆ ಎಂದು ಉತ್ತರ ಕೊರಿಯಾ ದೃಢಪಡಿಸಿದೆ. ಇದು ಇತ್ತೀಗಿನ ವರ್ಷಗಳಲ್ಲಿ ಅತ್ಯಂತ ಮಹತ್ವದ ಶಸ್ತ್ರಾಸ್ತ್ರ ಪರೀಕ್ಷೆಯಾಗಿದ್ದು ಅಮೇರಿಕ ಪ್ರದೇಶವನ್ನು ತಲುಪುವ ಸಾಮಥ್ರ್ಯ ಹೊಂದಿದೆ ಎಂದು ಹೇಳಿಕೊಂಡಿದೆ.. ಹ್ವಾಸಾಂಗ್ -12 ಕ್ಷಿಪಣಿಯು ಆಯ್ದ ಪ್ರದೇಶ ಮುಟ್ಟುವ ಮತ್ತು ನಿಖರ ಗುರಿ ಹೊಡೆಯಬಲ್ಲದು ಎಂದು ಅಧಿಕೃತ ಉತ್ತರಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ಹೇಳಿದೆ.ಕ್ಷಿಪಣಿಯ ಸಿಡಿತಲೆಯಲ್ಲಿ ಅಳವಡಿಸಲಾದ ಕ್ಯಾಮರಾವು ಬಾಹ್ಯಾಕಾಶದಿಂದ ಭೂಮಿಯ ಚಿತ್ರವನ್ನು ತೆಗೆದುಕೊಂಡಿತು ಮತ್ತು ಆಯುಧ ವ್ಯವಸ್ಥೆಯ ಕಾರ್ಯಾಚರಣೆಯ […]