ಹೈಪರ್ ಸಾನಿಕ್ ಕ್ಷಿಪಣಿಯ 2ನೇ ಯಶಸ್ವಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

ಸಿಯೋಲ್, ಜ.6- ಅಧ್ಯಕ್ಷ ಕಿಮ್‍ಜಾಂಗ್ ಉನ್ ಕೋವಿಡ್-19ರ ಸಾಂಕ್ರಾಮಿಕದ ಪಿಡುಗಿನ ನಡುವೆಯೂ ತನ್ನ ಮಿಲಿಟರಿ ಪಡೆಯ ಬಲ ಹೆಚ್ಚಿಸಲು ಸಂಕಲ್ಪ ಮಾಡಿದ ಕೆಲವೇ ದಿನಗಳಲ್ಲಿ ಶಬ್ದಾತೀತ ವೇಗದ ಕ್ಷಿಪಣಿಯೊಂದರ ಎರಡನೆ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಉತ್ತರ ಕೊರಿಯಾ ತಿಳಿಸಿದೆ. ಉತ್ತರ ಕೊರಿಯಾ ನಿನ್ನೆ ನಡೆಸಿದ ಈ ಪ್ರಯೋಗ ಸುಮಾರು ಎರಡು ತಿಂಗಳಲ್ಲಿ ಎರಡನೆಯದಾಗಿದೆ. ಇದು ಯಾವುದೇ ಸಮಯದಲ್ಲಿ ನಿಶ್ಶಸ್ತ್ರೀಕರಣ ಮಾತುಕತೆಗೆ ಮರಳುವ ಬದಲಾಗಿ ಅದು ಅಣ್ವಸ್ತ್ರ ಮತ್ತು ಕ್ಷಿಪಣಿ ಅಸ್ತ್ರಗಳನ್ನು ಆಧುನೀಕರಣಗೊಳಿಸುವ ಯೋಜನೆ ಹೊಂದಿರುವುದನ್ನು ತೋರಿಸುತ್ತದೆ. […]