ಉತ್ತರ ವಿಭಾಗದ ಪೊಲೀಸರ ಕಾರ್ಯಾಚರಣೆ, ನಾಲ್ವರು ಆರೋಪಿಗಳ ಸೆರೆ ; 13.3 ಕೆಜಿ ಗಾಂಜಾ ವಶ
ಬೆಂಗಳೂರು,ಫೆ.13- ಉತ್ತರ ವಿಭಾಗದ ನಂದಿನಿ ಲೇಔಟ್ ಮತ್ತು ಯಶವಂತಪುರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಒಟ್ಟು 13.3 ಕೆ.ಜಿ ಗಾಂಜಾ ಮತ್ತು 2000ರೂ ನಗದು ವಶಪಡಿಸಿ ಕೊಂಡಿದ್ದಾರೆ. ನಂದಿನಿ ಲೇಔಟ್ ಠಾಣೆ ಪೊಲೀಸರು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್‍ಸೇರಿದಂತೆ ಮೂವರನ್ನು ಬಂಧಿಸಿ, ಅವರಿಂದ 10ಕೆ.ಜಿ.ಗಾಂಜಾ ವಶಕ್ಕೆ ಪಡೆದಿದ್ದಾರೆ. ಲಕ್ಷ್ಮಿ ದೇವಿ ನಗರದ ಬ್ರಿಡ್ಜ್ ಕೆಳಗೆ ಮೂವರು ಅಪರಿಚಿತರು ಕೈಯಲ್ಲಿ ಕವರ್ ಹಿಡಿದು […]