ನೋಟರಿ ತಿದ್ದುಪಡಿ ಸೆಕ್ಷನ್‍ 5ನ್ನು ಕೈ ಬಿಡಲು ದೇವೇಗೌಡರ ಆಗ್ರಹ

ಬೆಂಗಳೂರು, ಜ.24- ನೋಟರಿ ಕಾಯ್ದೆ ತಿದ್ದುಪಡಿಯಲ್ಲಿನ ಪ್ರಸ್ತಾವಿತ ಸೆಕ್ಷನ್‍5ನ್ನು ಕೈ ಬಿಡುವಂತೆ ಮಾಜಿ ಪ್ರಧಾನಿ ಎಚ್‍.ಡಿ.ದೇವೇಗೌಡರು, ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ದೇಶದ 75 ಸಾವಿರ ನೋಟರಿ ವಕೀಲರ ಹಿತದೃಷ್ಠಿಯಿಂದ ಪತ್ರ ಬರೆಯುತ್ತಿರುವುದಾಗಿ ಹೇಳಿರುವ ದೇವೆಗೌಡರು, ನೋಟರಿಗಳ ಅವಧಿಯನ್ನು ಐದು ವರ್ಷಗಳಿಗೆ ಸೀಮಿತಗೊಳಿಸುವ ಮತ್ತು ನೋಟರಿ ಪ್ರಮಾಣ ಪತ್ರಗಳ ಸಂಖ್ಯೆಗಳ ಮೇಲೆ ಮಿತಿ ಹೇರುವ ತಿದ್ದುಪಡಿ ಮಸೂದೆ ತರ್ಕಬದ್ಧವಾಗಿಲ್ಲ ಹಾಗೂ ತಪ್ಪು ಕಲ್ಪನೆಯಿಂದ ಕೂಡಿದೆ ಎಂದು ವಿಶ್ಲೇಷಿಸಿದ್ದಾರೆ. ನೋಟರಿ ಕಾಯ್ದೆ 1952ಕ್ಕೆ ತಿದ್ದುಪಡಿ […]