163 ಕೋಟಿ ಜಾಹೀರಾತು ಖರ್ಚು ಪಾವತಿಸಲು ಆಪ್ ಸರ್ಕಾರಕ್ಕೆ ನೋಟೀಸ್

ನವದೆಹಲಿ,ಜ.12- ರಾಜಕೀಯ ಜಾಹೀರಾತುಗಳಿಗೆ ಮಾಡಿದ 163.62 ಕೋಟಿ ರೂ.ಗಳನ್ನು ಹತ್ತು ದಿನಗಳ ಒಳಗೆ ಪಾವತಿಸಲೇಬೇಕು ಇಲ್ಲದಿದ್ದರೆ ನಿಮ್ಮ ಕಚೇರಿಯನ್ನು ಸೀಲ್ ಮಾಡುವುದಾಗಿ ದೆಹಲಿ ಸರ್ಕಾರಕ್ಕೆ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ ಎಚ್ಚರಿಕೆ ನೀಡಿದೆ. ಆಪ್ ಸರ್ಕಾರದ ವಿರುದ್ಧವೇ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ ಈ ಎಚ್ಚರಿಕೆಯ ನೋಟೀಸ್ ನೀಡಿರುವುದು ಇದೀಗ ರಾಜಕೀಯ ಹಗ್ಗ ಜಗ್ಗಾಟಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ. ಆಪ್‍ನವರು 2017ರ ಮಾರ್ಚ್ 31ರವರೆಗೆ ಜಾಹೀರಾತಿಗಾಗಿ 99.31 ಕೋಟಿ ಖರ್ಚು ಮಾಡಿದ್ದರು ಎನ್ನಲಾಗಿದೆ. ಆ ಹಣವನ್ನು ಪಾವತಿಸದಿರುವುದಕ್ಕೆ 64.31 […]

ಮಾನವ ಹಕ್ಕುಗಳ ಆಯೋಗದಿಂದ ತಮಿಳುನಾಡು, ಬಿಹಾರ ಸರ್ಕಾರಗಳಿಗೆ ನೊಟೀಸ್

ನವದೆಹಲಿ, ಡಿ. 3- ಮದರಸದಲ್ಲಿ 12 ಅನಾಥ ಮಕ್ಕಳಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಮಿಳುನಾಡು ಮತ್ತು ಬಿಹಾರ ರಾಜ್ಯ ಸರ್ಕಾರಗಳಿಗೆ ನೊಟೀಸ್ ಜಾರಿ ಮಾಡಿದೆ. ಬಿಹಾರದಿಂದ ಕರೆತರಲಾದ 12 ಮಕ್ಕಳನ್ನು ಮದರಾಸದಲ್ಲಿ ಕೂಡಿ ಹಾಕಿ ನಿಂದಿಸಲಾಗಿದ್ದು, ಕಿರುಕುಲ ನೀಡುವುದಾಗಿ ವರದಿಯಾಗಿದೆ. ಇದನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಎರಡು ರಾಜ್ಯಸರ್ಕಾರಗಳಿಗೆ ಮತ್ತು ಚೆನ್ನೈ ಪೊಲೀಸ್ ಆಯುಕ್ತರಿಗೆ ನೊಟೀಸ್ ಜಾರಿ ಮಾಡಿದೆ. “ಜೆಡಿಎಸ್ […]