25ಕ್ಕೂ ಹೆಚ್ಚು ಕೊಲೆ-ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಅರೆಸ್ಟ್

ಬೆಂಗಳೂರು,ಡಿ.7- ಇಪ್ಪತ್ತೈದಕ್ಕೂ ಹೆಚ್ಚು ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ, ರಾಜಕೀಯ ಮುಖಂಡರ ಸಂಬಂಕನೆಂದು ಹೇಳಿಕೊಂಡಿರುವ ಕುಖ್ಯಾತ ದರೋಡೆಕೋರನನ್ನು ಡಿಜೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಾಜಿನಗರ ರೌಡಿಯೂ ಆಗಿರುವ ಆರೋಪಿ ಮನ್ಸೂರ್ ಅಹಮದ್ (22)ವಕೀಲರನ್ನೇ ಟಾರ್ಗೆಟ್ ಮಾಡಿ ಕಾರು ಹಾಗೂ ಇತರೆ ವಸ್ತುಗಳನ್ನು ದರೋಡೆ ಮಾಡುವ ಪ್ರವೃತ್ತಿ ಉಳ್ಳವನಾಗಿರುತ್ತಾನೆ. ವಕೀಲರೊಬ್ಬರ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಲಕ್ಷ ಮೌಲ್ಯದ ಕಾರು ಹಾಗು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವೋಟರ್ ಡೇಟಾ ಹಗರಣ : ಇಬ್ಬರು […]

155ಕ್ಕೂ ಹೆಚ್ಚು ಸರಗಳ್ಳತನ ಮಾಡಿದ್ದ ಮೂವರ ಬಂಧನ

ಬೆಂಗಳೂರು,ಅ.10- ನಗರ ಸೇರಿದಂತೆ ರಾಜ್ಯಾದ್ಯಂತ 155ಕ್ಕೂ ಹೆಚ್ಚು ಸರಗಳ್ಳತನ ಮಾಡಿ ಪರಾರಿಯಾಗಿದ್ದ ಕುಖ್ಯಾತ ಸರಗಳ್ಳ ಸೇರಿದಂತೆ ಮೂವರನ್ನು ಬಂಧಿಸಿರುವ ಬಾಗಲಗುಂಟೆ ಠಾಣೆ ಪೊಲೀಸರು 5 ಲಕ್ಷ ರೂ. ಬೆಲೆಯ 100 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಅಚ್ಯುತ್ ಅಲಿಯಾಸ್ ಗಣಿ, ಸಿದ್ದರಾಜು ಮತ್ತು ಪ್ರಸನ್ನ ಬಂಧಿತರು. ಸೆ.10ರಂದು ಬೆಳಗ್ಗೆ 5.30ರ ಸುಮಾರಿನಲ್ಲಿ ಭುವನೇಶ್ವರಿನಗರ ಟಿ.ದಾಸರಹಳ್ಳಿ, 8ನೇ ಮುಖ್ಯರಸ್ತೆ, 4ನೇ ಕ್ರಾಸ್ ನಿವಾಸಿ ತಮ್ಮ ಮನೆಯ ಮುಂದೆ ವಾಯುವಿಹಾರಕ್ಕೆ ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು […]

ಇಬ್ಬರು ಕುಖ್ಯಾತ ಸರಗಳ್ಳರ ಬಂಧನ

ಬೆಂಗಳೂರು,ಆ.26- ಹೆಲ್ಮೆಟ್ ಧರಿಸಿ ವಿವಿಧ ಬೈಕ್‍ಗಳು ಮತ್ತು ಟಾಟಾಏಸ್ ವಾಹನಗಳನ್ನು ಕೃತ್ಯಕ್ಕೆ ಬಳಸಿಕೊಂಡು ನಕಲಿ ನಂಬರ್ ಪ್ಲೇಟ್‍ಗಳನ್ನು ಬಳಸಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರ ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ದಕ್ಷಿಣ ವಿಭಾಗದ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿ 51 ಪ್ರಕರಣಗಳನ್ನು ಪತ್ತೆಹಚ್ಚಿ 1.5 ಕೋಟಿ ರೂ. ಮೌಲ್ಯದ ಚಿನ್ನದ ಸರಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳು ನಾಡು ಮೂಲದ ಸಂತೋಷ್(35) ಮತ್ತು ಬೆಂಗಳೂರಿನ ರವಿ(35) ಬಂಧಿತ ಸರಗಳ್ಳರು. ಸಂತೋಷ್ ಬಿಕಾಂ ಪದವೀಧರನಾಗಿದ್ದು, […]

ಮೋಜಿನ ಜೀವನಕ್ಕೆ ಬೈಕ್ ಕಳವು ಮಾಡುತ್ತಿದ್ದ ನಟೋರಿಯಸ್ ಆರೋಪಿ ಅರೆಸ್ಟ್

ಬೆಂಗಳೂರು,ಆ.7- ಶೋಕಿ ಹಾಗೂ ಮೋಜು-ಮಸ್ತಿನ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಆರೋಪಿಯೊಬ್ಬನನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ರೂ. ಮೌಲ್ಯದ 19 ಬೈಕ್‍ಗಳನ್ನು ವಶಪಡಿಸಿ ಕೊಂಡಿದ್ದಾರೆ. ಕೆ.ಆರ್.ಪುರದ ದೇವಸಂದ್ರ, ಜೆ.ಸಿ.ಲೇಔಟ್‍ನ 2ನೇ ಕ್ರಾಸ್ ನಿವಾಸಿ ಶೋಯಬ್ ಖಾನ್ ಅಲಿಯಾಸ್ ಹಾತ್ ತುಟ್ಟ ಅಲಿಯಾಸ್ ಟ್ಯಾಬ್ ಡೌವ್ (21) ಬಂಧಿತ ಬೈಕ್ ಕಳ್ಳ. ಈ ಆರೋಪಿಯು ತನ್ನ ಮೋಜು, ಮಸ್ತಿ ಮತ್ತು ಐಷರಾಮಿ ಜೀವನಕ್ಕಾಗಿ ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆ.ಆರ್.ಪುರ, ಮಹದೇವಪುರ, ವೈಟ್‍ಫೀಲ್ಡ್, […]