ನವೆಂಬರ್ 1ರಿಂದ ಜೆಡಿಎಸ್‍ ಪಂಚರತ್ನ ಅಭಿಯಾನ

ಬೆಂಗಳೂರು,ಅ.12- ಮುಂಬರುವ ವಿಧಾನಸಭೆ ಚುನಾವಣೆ ಸಿದ್ದತೆಗಳು ಆರಂಭಿಸಿರುವ ಜೆಡಿಎಸ್ ನವೆಂಬರ್ 1ರಿಂದ ಪಂಚರತ್ನ ಅಭಿಯಾನವನ್ನು ಕೈಗೊಳ್ಳಲಿದೆ. ಅಂದಿನಿಂದಲೇ ಚುನಾವಣಾ ಪ್ರಚಾರವನ್ನು ಕೂಡ ಕೈಗೊಳ್ಳಲಿದೆ. ಸುಮಾರು ಒಂದು ವರ್ಷದಿಂದಲೂ ಚುನಾವಣೆ ತಯಾರಿಯಲ್ಲಿ ತೊಡಗಿರುವ ಜೆಡಿಎಸ್ ನಾಯಕರು ಮೊದಲ ಹಂತದ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುತ್ತಿದ್ದಾರೆ. ನ.1ರಿಂದ ಪಂಚರತ್ನ ಅಭಿಯಾನ ಕೈಗೊಳ್ಳಲಿದ್ದು, ಈ ಅಭಿಯಾನದ ನೇತೃತ್ವವನ್ನು ಆಯಾ ಕ್ಷೇತ್ರಗಳಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಲಿರುವ ಅಭ್ಯರ್ಥಿಗಳೇ ವಹಿಸಬೇಕಾಗುತ್ತದೆ. ಪಂಚರತ್ನದ ರೂಪುರೇಷೆ, ಪಂಚರತ್ನ ಅಭಿಯಾನ ಸಾಗುವ ಮಾರ್ಗಗಳನ್ನು ಅಂತಿಮಗೊಳಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ […]