ಡಿ.27ರಂದು ಮೃತಪಟ್ಟ ಮಹಿಳೆಗೆ ಓಮಿಕ್ರಾನ್ ಸೋಂಕು ಇತ್ತೇ..?

ಭುವನೇಶ್ವರ,ಜ.7- ಕಳೆದ ಡಿಸೆಂಬರ್ 27ರಂದು ಮೃತಪಟ್ಟ ಒಡಿಶಾದ 45 ವರ್ಷದ ಮಹಿಳೆಗೆ ಓಮಿಕ್ರಾನ್ ರೂಪಾಂತರಿ ಕೋವಿಡ್ ಸೋಂಕು ಇದ್ದುದು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಕೆಯ ಸಾವಿಗೆ ಏನು ಕಾರಣ ಎಂಬುದನ್ನು ನಿಶ್ಚಯಿಸಲು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಂಗೀರ್ ಜಿಲ್ಲೆಯ ನಿವಾಸಿಯಾಗಿದ್ದ ಈ ಮಹಿಳೆ ಬ್ರೈನ್ ಸ್ಟ್ರೋಕ್‍ನಿಂದ ಬಳಲಿದ್ದು ಡಿಸೆಂಬರ್ 20ರಂದು ಆಕೆಯನ್ನು ಬಾಲಂಗೀರ್‍ನ ಭೀಮಾಭೋಯಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳ ಬಳಿಕ ಆಕೆಯನ್ನು ಬುರ್ಲಾದೆಲ್ಲಿನ ವೀರ್ […]