ಗೂಢಚಾರಿಕೆ ಬಲೂನ್ ಹೊಡೆದುರುಳಿಸಿದ ಅಮೆರಿಕ ವಿರುದ್ಧ ಚೀನಾ ಕೆಂಡ

ಬೀಜಿಂಗ್,ಫೆ.5- ಗೂಢಚಾರಿಕೆ ಬಲೂನ್ ಅನ್ನು ಅಮೆರಿಕ ಹೊಡೆದುರುಳಿಸಿರುವುದು ಚೀನಾವನ್ನು ಕೆರಳಿಸಿದೆ. ನಿಮ್ಮ ನಿರ್ಧಾರಕ್ಕೆ ನಾವು ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದೂ ಎಚ್ಚರಿಸಿದೆ. ಚೀನಾದ ಗೂಢಚಾರಿಕೆ ಬಲೂನ್ ಅನ್ನು ಅಟ್ಲಾಂಟಿಕ ಕರಾವಳಿಯಲ್ಲಿ ಹೊಡೆದುರುಳಿಸಿರುವ ಪೆಂಟಗಾನ್ ಕ್ರಮವನ್ನು ಬಿಡೆನ್ ಆಡಳಿತ ಶ್ಲಾಘಿಸಿರುವ ಬೆನ್ನಲ್ಲೆ ಚೀನಾ ಅತೃಪ್ತಿ ಹೊರಹಾಕಿರುವುದು ಗಮನಿಸಿದರೆ ಎರಡು ಬಲಾಢ್ಯ ರಾಷ್ಟ್ರಗಳ ನಡುವಿನ ವೈಷಮ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಚೀನಾದ ನಡೆ ನಮ್ಮ ದೇಶಕ್ಕೆ ವಿರುದ್ಧವಾದ ನಡೆಯಾಗಿರುವುದರಿಂದ ಬಲೂನ್ ಹೊಡೆದುರುಳಿಸಿರುವ ನಮ್ಮ ಕಾರ್ಯ ಕಾನೂನುಬದ್ಧವಾಗಿದೆ ಎಂದು ಅಮೆರಿಕ […]

ದೀದಿ ನಮಗೆ ನಿಮ್ಮ ಆಶೀರ್ವಾದ ಬೇಕಿಲ್ಲ

ಕೋಲ್ಕತ್ತಾ,ಫೆ.2- ನಿಮ್ಮ ಆರ್ಶೀವಾದವಿಲ್ಲದೆ ನಾವು ಉತ್ತಮವಾಗಿರುತ್ತೇವೆ ಏಕೆಂದರೆ ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನಕ್ಕೆ ಒಗ್ಗಿಕೊಂಡಿದ್ದೇವೆ ಎಂದು ವಿಶ್ವಭಾರತಿ ವಿಶ್ವ ವಿದ್ಯಾಲಯ ಆಡಳಿತ ಮಂಡಳಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಡ್ಡು ಹೊಡೆದಿದೆ. ನೊಬೆಲ್ ಪ್ರಶಸ್ತಿ ಪುರಸ್ಕøತ ಅಮತ್ರ್ಯ ಸೇನ್ ಅವರು ಅಕ್ರಮವಾಗಿ ಭೂಮಿ ವಶಪಡಿಸಿಕೊಂಡಿದ್ದಾರೆ ಎಂಬ ವಿಶ್ವಭಾರತಿ ವಿಶ್ವವಿದ್ಯಾಲಯದ ಆರೋಪಕ್ಕೆ ಸಂಬಂಧಿಸಿದಂತೆ ಆರಂಭವಾದ ಗಲಾಟೆ ಇದೀಗ ಸಂಪೂರ್ಣ ರಾಜಕೀಯ ಕದನಕ್ಕೆ ತಿರುಗಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ […]

ಟೀಮ್ ಇಂಡಿಯಾ ವರುಣನ ಕಾಟ

ಹ್ಯಾಮಿಲ್ಟನ್, ನ. 27-ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ 2 ಪಂದ್ಯದಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾಗುವ ಮೂಲಕ ಶಿಖರ್ ಧವನ್ ಸಾರಥ್ಯದ ಟೀಂ ಇಂಡಿಯಾಗೆ ಕಾಟ ಕೊಟ್ಟಿದೆ. 3 ಟ್ವೆಂಟಿ-20 ಸರಣಿಯೂ ಮಳೆ ಕಾಟದಿಂದಾಗಿ 2 ಪಂದ್ಯಗಳು ರದ್ದಾದರೂ ಕೂಡ 2ನೆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಟೀಮ್ ಇಂಡಿಯಾ ತಂಡವು ಗೆಲುವು ಸಾಧಿಸಿದ್ದ 1-0 ಯಿಂದ ಸರಣಿ ಕೈ ವಶಪಡಿಸಿಕೊಂಡಿತ್ತು. ಅಕ್ಲೆಂಡ್‍ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‍ಗಳಿಂದ […]

ಚೆನ್ನೈ- ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಮೋದಿ ಚಾಲನೆ

ಬೆಂಗಳೂರು,ನ.11- ಚೆನ್ನೈ-ಬೆಂಗಳೂರು- ಮೈಸೂರು ನಡುವೆ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ಕೊಟ್ಟರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆಯಲ್ಲಿದ್ದರು. ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್‍ಪ್ರೆಸ್ ಒಟ್ಟು 483 ಕಿ.ಮೀ. ದೂರವನ್ನು ಕ್ರಮಿಸಲಿದೆ. ವಂದೇ ಭಾರತ್ 2.0¿ ರೈಲುಗಳು, ಕವಚ ಎಂಬ ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ (ಟಿಸಿಎಎಸ್) ಸೇರಿದಂತೆ […]