ರಾತ್ರಿಯಿಡಿ ಮುಂದುವರೆದ ಬಿಬಿಸಿ ಕಚೇರಿ ಮೇಲಿನ ದಾಳಿ

ನವದೆಹಲಿ,ಫೆ.15- ಮುಂಬೈ ಮತ್ತು ದೆಹಲಿಯಲ್ಲಿರುವ ಬಿಬಿಸಿ ಕಚೇರಿಗಳ ಮೇಲಿನ ದಾಳಿ ರಾತ್ರಿಯಿಡಿ ಮುಂದುವರೆದಿದೆ.ಭಾರತೀಯ ತೆರಿಗೆ ಅಧಿಕಾರಿಗಳು ರಾತ್ರಿಯಿಡಿ ಬಿಬಿಸಿ ಕಚೇರಿಗಳಲ್ಲಿ ಶೋಧ ಮುಂದುವರೆಸಿದ್ದರಿಂದ ಬಿಬಿಸಿ ಪ್ರಸಾರ ವಿಭಾಗವನ್ನು ಹೊರತುಪಡಿಸಿ ಉಳಿದೆಲ್ಲ ನೌಕರರು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸಿಬ್ಬಂದಿಗಳಿಗೆ ಈಮೇಲ್ ರವಾನಿಸಲಾಗಿದೆ. ತೆರಿಗೆ ಅಕಾರಿಗಳು ವೈಯಕ್ತಿಕ ಆದಾಯದ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ದೂರವಿರಬಹುದು. ಆದರೆ, ಇತರ ವೇತನ ಸಂಬಂತ ಪ್ರಶ್ನೆಗಳಿಗೆ ಉತ್ತರಿಸಬೇಕು ಹಾಗೂ ಅಧಿಕಾರಿಗಳೊಂದಿಗೆ ಸಹಕರಿಸಲು ಮತ್ತು ಪ್ರಶ್ನೆಗಳಿಗೆ ಸಮಗ್ರವಾಗಿ ಉತ್ತರಿಸಲು ತನ್ನ ಸಿಬ್ಬಂದಿಗೆ ಸಲಹೆ ನೀಡಲಾಗಿದೆ.ಬಿಬಿಸಿ ಕಚೇರಿಗಳ ಮೇಲೆ […]