ಉಕ್ರೇನ್-ರಷ್ಯಾ ವಾರ್ ಎಫೆಕ್ಟ್ : ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ 5 ಡಾಲರ್ ಏರಿಕೆ

ಬೀಜಿಂಗ, ಮಾರ್ಚ್ 2-ಯುಕ್ರೇನ್ ಮೇಲೆ ರಷ್ಯಾ ನಡೆಸಿರುವ ಯುದ್ದದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮುಂದುವರೆದಿರುವ ನಡುವೆ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‍ಗೆ ಇಂದು 5 ಡಾಲರ್ ಏರಿಕೆಯಾಗಿದೆ.  ನ್ಯೂಯಾರ್ಕ್ ಮಾರ್ಕೆಟ್ ಆಯಿಲ್ ಎಕ್ಸೆಚೇಂಜ್‍ನ ಎಲೆಕ್ಟ್ರಾನಿಕ್ ವಹಿವಾಟಿನಲ್ಲಿ ಬೆಂಚ್ಮಾರ್ಕ್ ಕಚ್ಚಾ ತೈಲ ಪ್ರತಿ ಬ್ಯಾರೆಲ್ 5.24 ಡಾಲರ್ ಏರಿಕೆಯಾಗಿ 108.60 ಕ್ಕೆ ಮುಟ್ಟಿದೆ. ಬ್ರೆಂಟ್ ಕಚ್ಚಾ ತೈಲ ಅಂತರಾಷ್ಟ್ರೀಯ ಬೆಲೆ ಮಾನದಂಡವು ಲಂಡನ್‍ನಲ್ಲಿ ಪ್ರತಿ ಬ್ಯಾರೆಲ್ 110.40 ಡಾಲರ್‍ಗೆ ಏರಿದೆ.ಪ್ರಮುಖ ತೈಲ ಗ್ರಾಹಕರ ಕ್ಲಬ್ ಇಂಟನ್ಯಾಷನಲ್ ಎನರ್ಜಿ […]