4 ಚೀನೀ ಪ್ರಜೆಗಳ ಹತ್ಯೆ : ಶಂಕಿತನ ಬಂಧನ

ಮಿಷನ್ (ಅಮೆರಿಕ), ನ. 23 – ಓಕ್ಲಹೋಮಾ ಪ್ರದೇಶದ ಫಾರ್ಮ್‍ನಲ್ಲಿ ನಡೆದಿದ್ದ ನಾಲ್ವರ ಚೀನೀ ಪ್ರಜೆಗಳ ಹತ್ಯೆ ಘಟನೆಗೆ ಸಂಭಂದಿಸಿದಂತೆ ಶಂಕಿತನನ್ನು ದಕ್ಷಿಣ ಪ್ರೋರಿಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಿಯಾಮಿ ಬೀಚ್ ಪೊಲೀಸರು ವು ಚೆನ್ ಎಂಬುವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಒಕ್ಲಹೋಮ ಸ್ಟೇಟ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದವರಲ್ಲಿ ಮೂವರು ಪುರುಷರು ಮತ್ತು ಒಬ್ಬ ಮಹಿಳೆಯಾಗಿದ್ದು ಇವರೆಲ್ಲಾ ಚೀನೀ ನಾಗರಿಕರಾಗಿದ್ದು ಒಕ್ಲಹೋಮ ನಗರದ ವಾಯುವ್ಯಕ್ಕೆ ಸುಮಾರು 90 ಕಿಲೋಮೀಟರ್‍ದೂರದಲ್ಲಿರುವ ಹೆನ್ನೆಸ್ಸಿಯ ಪಶ್ಚಿಮಕ್ಕೆ […]