ಬಾಲಕಿಗೆ ಲೈಂಗಿಕ ದೌರ್ಜನ್ಯ: ವೃದ್ಧನ ಹೊಡೆದು ಕೊಂದ ಜನ

ಬೆಂಗಳೂರು,ಡಿ.12- ಅಪ್ರಾಪ್ತ ಬಾಲಕಿಯನ್ನು ಬೆತ್ತಲೆಗೊಳಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಆರೋಪಿಸಿ ವೃದ್ಧನೊಬ್ಬನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಬಾಬೂಸಾಪಾಳ್ಯದ ನಿವಾಸಿ ಕುಪ್ಪಣ್ಣ ಅಲಿಯಾಸ್ ಕುಪ್ಪಸ್ವಾಮಿ(73) ಕೊಲೆಯಾದ ವೃದ್ಧ.ಹನ್ನೆರಡು ವರ್ಷದ ಬಾಲಕಿ ನಿನ್ನೆ ಸಂಜೆ ಮನೆ ಸಮೀಪದ 50 ಮೀ. ದೂರದಲ್ಲಿ ಒಣಗಿ ಹಾಕಿದ್ದ ಶಾಲಾ ಸಮವಸ್ತ್ರವನ್ನು ತೆಗೆದುಕೊಂಡು ಬರಲು ಹೋದಾಗ ಕುಪ್ಪಣ್ಣ ತನ್ನ ಮನೆಗೆ ಕರೆದೊಯ್ದ ಜ್ಯೂಸ್ ಕೊಟ್ಟು ಬೆತ್ತಲೆಗೊಳಿಸಿಲೈಂಗಿಕ ದೌರ್ಜನ್ಯವೆಸಗಿದ್ದಾರೆಂಬ ಆರೋಪ ಕೇಳಿಬಂದಿದೆ. ಹೊರಗೆ ಹೋಗಿದ್ದ ಬಾಲಕಿ ಕಾಣದಿದ್ದಾಗ […]