ಶಾಕಿಂಗ್ : ಬೆಂಗಳೂರಲ್ಲೇ ಇದ್ದಾರಂತೆ 1 ಲಕ್ಷ ಓಮಿಕ್ರಾನ್ ಸೋಂಕಿತರು..!

ಬೆಂಗಳೂರು,ಜ.25-ರಾಜಧಾನಿಗೆ ಓಮಿಕ್ರಾನ್ ಗಂಡಾಂತರ ಎದುರಾಗಿದೆ. ಇಡೀ ರಾಜ್ಯದಲ್ಲಿ ಇದುವರೆಗೂ ಕೇವಲ 931 ಮಂದಿ ಓಮಿಕ್ರಾನ್ ಸೋಂಕಿತರಿದ್ದಾರೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಒಂದು ಅಂದಾಜಿನ ಪ್ರಕಾರ ಬೆಂಗಳೂರು ಒಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ ಇವರಲ್ಲಿ ಶೇ.90 ರಷ್ಟು ಮಂದಿಗೆ ಓಮಿಕ್ರಾನ್ ಸೋಂಕು ತಗುಲಿದೆ ಎಂಬ ಅಂಶ ಇದೀಗ ಬಯಲಾಗಿದೆ. ನಗರದಲ್ಲಿ ಪ್ರತಿನಿತ್ಯ 300ಕ್ಕೂ ಹೆಚ್ಚು ಮಂದಿಯ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್‍ಗೆ ರವಾನಿಸಲಾಗುತ್ತಿದೆ. ಇದುವರೆಗೂ ಜಿನೋಮಿಕ್ ಸೀಕ್ವೆನ್ಸಿಂಗ್‍ಗೆ ಕಳುಹಿಸಲಾಗಿದ್ದ ವರದಿ ಬಿಬಿಎಂಪಿ ಕೈ ಸೇರಿದ್ದು, ಪರೀಕ್ಷೆಗೆ ರವಾನಿಸಲಾಗಿದ್ದ […]