ನಿಮ್ಮ ದೇಹದಲ್ಲಿ ಈ ಲಕ್ಷಣಗಳಿವೆಯಾ..? ಹಾಗಾದ್ರೆ ಒಮಿಕ್ರಾನ್ ಇರಬಹುದು ಹುಷಾರ್

ವಾಷಿಂಗ್ಟನ್, ಜ.7- ಪೇಲವ, ಬೂದು ಅಥವಾ ನೀಲಿಬಣ್ಣದ ಚರ್ಮ, ತುಟಿಗಳು ಅಥವಾ ಉಗುರುಗಳು ಕಂಡುಬಂದರೆ ನಮ್ಮ ತ್ವಚೆಯ ಬಣ್ಣವನ್ನು ಪರಿಗಣಿಸಿ ಅವು ರಕ್ಷದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿರುವ ಸೂಚಕಗಳಾಗಿರಬಹುದು ಎಂದು ಅಮೆರಿಕನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ಹೇಳಿದೆ. ಈ ಲಕ್ಷಣಗಳು ಭಾರೀ ಸಾಂಕ್ರಾಮಿಕವಾದ ಒಮಿಕ್ರಾನ್ ರೂಪಾಂತರಿಯ ಲಕ್ಷಣಗಳಾಗಿರಬಹುದು. ಇವು ಸಾಮಾನ್ಯ ಕೋವಿಡ್-19ರ ಲಕ್ಷಣಗಳೀಗಿಂತ ತೀವ್ರ ಭಿನ್ನವಾಗಿವೆ ಎಂದು ತಜ್ಞರು ತಿಳಿಸಿದ್ದಾರೆ. ಒಮಿಕ್ರಾನ್ ರೂಪಾಂತರಿಯ ಮೂರು ಪ್ರಮುಖ ಲಕ್ಷಣಗಳನ್ನು ಹೊರತುಪಡಿಸಿ ರೋಗಿಗಳು ಉಗುರುಗಳು, ಚರ್ಮ […]