ಕರ್ತಾರ್ ಪುರ್ ಗುರುದ್ವಾರದ ಯಾತ್ರಾರ್ಥಿಗಳಿಂದ ಪಾಕ್ ಶುಲ್ಕ ವಸೂಲಿ

ನವದೆಹಲಿ,ಮಾ.25-ಕರ್ತಾರ್‍ಪುರ ಸಾಹಿಬ್ ಕಾರಿಡಾರ್ ಮೂಲಕ ಗುರುದ್ವಾರ ದರ್ಬಾರ್ ಸಾಹಿಬ್‍ಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಪಾಕಿಸ್ತಾನ ಶುಲ್ಕ ವಿಧಿಸುವುದನ್ನು ಮುಂದುವರೆಸಿದೆ. ಕರ್ತಾರ್‍ಪುರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಶುಲ್ಕ ವಿಧಿಸಬಾರದು ಎಂಬ ಭಾರತದ ಮನವಿಯನ್ನು ಪುರಸ್ಕರಿಸದೆ ಶುಲ್ಕ ವಿಧಿಸುವುದನ್ನು ಪಾಕ್ ಮುಂದುವರೆಸಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮುರುಳೀಧರ್ ಹೇಳಿದ್ದಾರೆ. ಕರ್ತಾರ್‍ಪುರ್ ಸಾಹಿಬ್ ಕಾರಿಡಾರ್ ಮೂಲಕ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‍ಪುರಕ್ಕೆ ಭೇಟಿ ನೀಡುವುದನ್ನು ಪಾಸ್‍ಪೋರ್ಟ್ ಮುಕ್ತಗೊಳಿಸಲು ಪ್ರಾತಿನಿಧ್ಯಗಳನ್ನು ಸ್ವೀಕರಿಸಲಾಗಿದೆ. ಆದಾಗ್ಯೂ, ಅಕ್ಟೋಬರ್ 24, 2019 ರಂದು ಭಾರತ […]

ಪಾಕ್ ಮೇಲೆ ದಾಳಿಗೆ ಸಜ್ಜಾಗಿದೆ ಭಾರತ : ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ

ನವದೆಹಲಿ,ಮಾ.9-ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನಕ್ಕೆ ಭಾರತ ತನ್ನ ಸೇನಾ ಶಕ್ತಿ ಮೂಲಕ ಪಾಠ ಕಲಿಸುವ ಸಾಧ್ಯತೆಗಳಿವೆ ಎಂದು ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಭಾರತ ಮತ್ತು ಪಾಕಿಸ್ತಾನ ಮತ್ತು ಭಾರತ ಮತ್ತು ಚೀನಾ ನಡುವೆ ಹೆಚ್ಚಿದ ಉದ್ವಿಗ್ನತೆ ಮತ್ತು ಅವುಗಳ ನಡುವೆ ಘರ್ಷಣೆಯ ಸಾಧ್ಯತೆಯನ್ನು ವಿಶ್ವ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸಂಸ್ಥೆ ಸಲಹೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಪಾಕಿಸ್ತಾನದ ಪ್ರಚೋದನೆಗಳಿಗೆ ಮಿಲಿಟರಿ ಬಲದೊಂದಿಗೆ ಪ್ರತ್ಯುತ್ತರ ನೀಡುವ ಸಾಧ್ಯತೆ ಇದ್ದು, ಈ […]

ಮದ್ದೂರಿನ ಶಿಂಷಾ ಸೇರಿ 7 ಸಹಕಾರ ಬ್ಯಾಂಕ್‍ಗಳಿಗೆ ಆರ್‌ಬಿಐ ನಿರ್ಬಂಧ

ನವದೆಹಲಿ,ಫೆ.25- ಆರ್ಥಿಕವಾಗಿ ಜನರ ಜೀವನಾಡಿಯಾಗಿದ್ದ ಸಹಕಾರ ಬ್ಯಾಂಕ್‍ಗಳಲ್ಲಿ ದಿನೇ ದಿನೇ ಅವ್ಯವಹಾರಗಳು, ಅಕ್ರಮಗಳು, ಅಶಿಸ್ತು ಹೆಚ್ಚುತ್ತಿದ್ದು, ಕೇಂದ್ರ ಬ್ಯಾಂಕ್ ಆರ್‌ಬಿಐ ಒಂದೇ ದಿನ ಮಂಡ್ಯ ಜಿಲ್ಲೆಯ ಮದ್ದೂರಿನ ಸಂಸ್ಥೆಯೂ ಸೇರಿದಂತೆ ದೇಶಾದ್ಯಂತ ಏಳು ಸಹಕಾರ ಬ್ಯಾಂಕ್‍ಗಳ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಆದೇಶ ನೀಡಿದೆ. ಬ್ಯಾಂಕಿಂಗ್ ರೆಗ್ಯೂಲೇಷನ್ ಆಕ್ಟ್ 1949 ಸೆಕ್ಷನ್ 35 ಎ ಮತ್ತು ಓದಲಾದ 56 ಕಲಂ ಅಡಿ ಸದರಿ ಬ್ಯಾಂಕ್‍ಗಳಿಗೆ ಆರು ತಿಂಗಳ ಕಾಲ ಯಾವುದೇ ವಹಿವಾಟು ನಡೆಸಬಾರದು ಎಂಬ ನಿರ್ಬಂಧ ವಿಧಿಸಲಾಗಿದೆ. ಆರ್‍ಬಿಐನ ಪ್ರಧಾನ […]

ಚರ್ಚೆಗೆ ಗ್ರಾಸವಾದ ಎಚ್‍ಡಿಕೆ ಬ್ರಾಹ್ಮಣ ಟೀಕೆ

ಬೆಂಗಳೂರು,ಫೆ.7- 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿ, ಆರ್‍ಎಸ್‍ಎಸ್ ಅನ್ನು ಟೀಕಿಸುವ ಭರದಲ್ಲಿ ಬ್ರಾಹ್ಮಣರ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಡಿದ ಮಾತುಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಈ ಬೆನ್ನಲ್ಲೇ ಹೆಚ್.ಡಿ ಕುಮಾರಸ್ವಾಮಿ ಅವರ ಬ್ರಾಹ್ಮಣ ಸಿಎಂ ಹೇಳಿಕೆ ಹಾಗೂ ವಿಪಕ್ಷ ನಾಯಕರ ವಾಗ್ದಾಳಿ, ಆರೋಪಗಳಿಂದ ಪಕ್ಷಕ್ಕೆ ಆಗುವ ಹಾನಿ ತಪ್ಪಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ವಿಪಕ್ಷ ನಾಯಕರ ಹೇಳಿಕೆಗಳಿಂದ ಪಕ್ಷಕ್ಕೆ ಆಗುವ ಹಾನಿ ತಡೆಯುವ ಸಲುವಾಗಿ ಬಿಜೆಪಿ ಜಾಲತಾಣಗಳ ಮೊರೆ ಹೋಗಿದೆ. […]