ಕಾಂಗ್ರೆಸ್‍ನಲ್ಲಿ 2 ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಇಲ್ಲ: ಡಿಕೆಶಿ

ಬೆಂಗಳೂರು,ಜ.20- ಕಾಂಗ್ರೆಸ್‍ನಲ್ಲಿ ಒಬ್ಬರಿಗೆ ಒಂದೇ ಕ್ಷೇತ್ರ, ಎರಡು ಕಡೆ ಸ್ಪರ್ಧೆ ಮಾಡಲು ಅವಕಾಶ ಕೇಳಿ ಯಾರು ಅರ್ಜಿ ಸಲ್ಲಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿರುವ ತಮ್ಮ ನಿವಾಸದಲ್ಲಿ ನೆಲಮಂಗಲ ನಗರಸಭೆಯ ಹಲವು ಪ್ರಮುಖ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಹಲವು ಭ್ರಷ್ಟಚಾರಗಳು ಪ್ರತಿದಿನ ಹೊರ ಬರುತ್ತಿವೆ. ಅದರಿಂದ ಬೇಸತ್ತ ಜನ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇದೆ ಎಂದು ಸೇರ್ಪಡೆಯಾಗುತ್ತಿದ್ದಾರೆ. ಎಲ್ಲರೂ ಬೇಷರತ್ ಆಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದರು. […]

ಅಮೇರಿಕ ಸಂಸತ್‌ನಲ್ಲಿ ಟ್ರಂಪ್’ಗೆ ಹೆಚ್ಚಿದ ಬಲ

ವಾಷಿಂಗ್ಟನ್, ನ.16 – ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಸದನ )ಆಯ್ಕೆಯಲ್ಲಿ ರಿಪಬ್ಲಿಕನ್ ಪಕ್ಷ ಬಹುಮತದ ತುದಿಯಲ್ಲಿದ್ದು ಕೆವಿನ್ ಮೆಕಾರ್ಥಿ ಅವರನ್ನು ಮುಂದಿನ ಸ್ಪೀಕರ್ ಸ್ಥಾನಕ್ಕೆ ಸಂಸದರು ಆಯ್ಕೆ ಮಾಡಿದ್ದಾರೆ. 435 ಸದಸ್ಯಬಲದ ಸಂಸತ್ತಿನಲ್ಲಿ ಮ್ಯಾಜಿಕ್ ಸಂಖ್ಯೆ 218 ತಲುಪಲು ಇನ್ನು 1 ಸ್ಥಾನ ಮಾತ್ರ ಬಾಕಿ ಇದ್ದು ,ಬಹುತೇಕ ಬಹುಮತ ರಿಪಬ್ಲಿಕನ್ ಪಕ್ಷಕ್ಕೆ ಒಲೆಯುವುದು ಪಕ್ಕ ಆಗಿದೆ ಇದರಿಂದ ಅಮೆರಿಕ ಮಾಜಿ ಅಧ್ಯಕ್ಷ ಡೊನಲ್ಡ್ ಟ್ರಂಪ್ ಬಲ ಹೆಚ್ಚಾಗಿದ್ದು ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಭಲ ಸ್ಪರ್ಧೆ ನಿಚ್ಚಿತವಾಗಿದೆ. […]

ಸಾಮಾಜಿಕ ಜಾಲತಾಣ ದೊಡ್ಡ ಸವಾಲಾಗಿದೆ : ನ್ಯಾ.ಚಂದ್ರಚೂಡ್

ನವದೆಹಲಿ,ನ.12- ಪ್ರಸ್ತುತ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣ ದೊಡ್ಡ ಸವಾಲಾಗಿದೆ ಎಂದು ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಸುದ್ದಿ ಸಂಸ್ಥೆ ಆಯೋಜಿಸಿದ್ದ ನಾಯತ್ವ ಸಮಾವೇಶದ ಕೊನೆಯ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಟ್ವಿಟರ್, ಟೆಲಿಗ್ರಾಂ, ಇನ್‍ಸ್ಟಾಗ್ರಾಮ್‍ನಲ್ಲಿ ನ್ಯಾಯಾೀಧಿಶರ ಮೌಲ್ಯಮಾಪನಗಳು ನಡೆಯುತ್ತಿವೆ. ನ್ಯಾಯಾೀಧಿಶರು ಸುಮ್ಮನೆ ಇದ್ದರೆ ಅದರ ಪರಿಣಾಮ ನಿರ್ಣಯ ತೆಗೆದುಕೊಳ್ಳವುದರ ಮೇಲೆ ಅಪಾಯಕಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮಷ್ಟಕ್ಕೆ ನಾವು ಸಮಕಾಲೀನ ಸವಾಲುಗಳಿಗೆ ಮರುಗಳಿಕೆ, ಮರು ಆಲೋಚನೆ ಮತ್ತು ಪುನರ್ ವಿನ್ಯಾಸಗೊಳ್ಳುವ […]

ಜಪಾನ್‌ಗೆ ಅಪ್ಪಳಿಸಿದ ಚಂಡಮಾರುತ, ಜನಜೀವನ ಅಸ್ತವ್ಯಸ್ತ

ಟೊಕಿಯೋ, ಸೆ.19: ಜಪಾನ್‍ಗೆ ನೆನ್ಮಡೋಲ್ ಚಂಡಮಾರುತ ಅಪ್ಪಳಿಸಿದ್ದು, ಕ್ಯುಶು ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ ಹಲವು ಮನೆಗಳು ನಾಶಗೊಂಡಿದ್ದು, ವಾಹನಗಳು ನೀರಿನಲ್ಲಿ ಮುಳುಗಿ ಹಲವು ಅವಾಂತರಗಳು ಸಂಭವಿಸಿದೆ.ಇಂದು ಮುಂಜಾನೆ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಇನ್ನು ಕೆಲವರು ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಾಹಣಾ ಅಧಿಕಾರಿ ಯೋಶಿಹರು ಮೇಡಾ ಅವರು ಹೇಳಿದ್ದಾರೆ. ಸುಮಾರು 162 ಕಿ.ಲೋಮೀಟರ್ ವೇಗದಲ್ಲಿ ಚಂಡಮಾರುತ ಬೀಸುತ್ತದೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದ್ದು, ಈಗಾಗಲೇ ಸುಮಾರು ಹಲವಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ನೈರುತ್ಯ ಜಪಾನ್ […]

ಮತ್ತೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ರಾಜ್ಯಾದ್ಯಂತ ಬಿಜೆಪಿ ಸಾಧನ ಸಮಾವೇಶ

ಬೆಂಗಳೂರು,ಜು.27- ಕರ್ನಾಟಕದಲ್ಲಿ ಪಕ್ಷಕ್ಕೆ ಮ್ಯಾಜಿಕ್ ನಂಬರ್ (113) ದಕ್ಕಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕಾರ್ಯತಂತ್ರ ರೂಪಿಸುತ್ತಿದೆ. ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣತೊಟ್ಟಿರುವ ಹೈಕಮಾಂಡ್, ಪ್ರಚಾರಕ್ಕೆ ಭರ್ಜರಿ ಕಾರ್ಯತಂತ್ರ ಹೆಣೆದಿದೆ. ಡಿಸೆಂಬರ್‍ನಲ್ಲಿ ನಡೆಯಲಿರುವ ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ದೆಹಲಿ ನಾಯಕರು ಸಂಪೂರ್ಣವಾಗಿ ಕರ್ನಾಟಕದ ಕಡೆ ಗಮನ ಕೇಂದ್ರೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರಂತರವಾಗಿ […]

ವರ್ಷ ಪೂರೈಸಿದ ಬೆನ್ನಲ್ಲೇ ಬಂಪರ್ ಕೊಡುಗೆ ನೀಡಲು ಬೊಮ್ಮಾಯಿ ಸರ್ಕಾರ ನಿರ್ಧಾರ

ಬೆಂಗಳೂರು, ಜು.27- ಹಲವು ಏಳು ಬೀಳುಗಳ ನಡುವೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯ ಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ರೈತರು, ಬಡ-ಮಧ್ಯಮ ವರ್ಗದ ಜನರಿಗೆ ಬಂಪರ್ ಕೊಡುಗೆ ನೀಡಲು ಸರ್ಕಾರ ಮುಂದಾಗಿದೆ. ನಾಳೆ ರಾಜ್ಯದ ಜನತೆಗೆ ಸಾವಿರಾರು ಕೋಟಿ ರೂ. ಘೋಷಿಸಲಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ, ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ಭರ್ತಿಯಾ ಗುತ್ತಿರುವ ಹಿನ್ನೆಲೆಯಲ್ಲಿ ಈ ಕೊಡುಗೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದು, ರೈತರು, ಬಡ-ಮಧ್ಯಮ ವರ್ಗದವರಿಗೆ ಅನುಕೂಲ ಒದಗಿಸುವ […]

ಏಳು-ಬೀಳುಗಳ ನಡುವೆ 1 ವರ್ಷ ಪೂರೈಸಿದ ಬೊಮ್ಮಾಯಿ ಸರ್ಕಾರ : ಜು.28ಕ್ಕೆ ಸಾಧನಾ ಸಮಾವೇಶ

ಬೆಂಗಳೂರು,ಜು.24- ಹಲವು ಏಳುಬೀಳುಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ಇದೇ 28ಕ್ಕೆ ಒಂದು ವರ್ಷ ಪೂರೈಸುತ್ತಿದ್ದಾರೆ. ಸರ್ಕಾರದ ಮೇಲೆ ಕೇಳಿಬಂದಿದ್ದ ಹಲವು ಗಂಭೀರ ಸ್ವರೂಪದ ಆರೋಪಗಳ ನಡುವೆಯೂ ಯಾವುದಕ್ಕೂ ಎದೆಗುಂದದೆ ಎಲ್ಲವನ್ನೂ ಎದುರಿಸಿಯೇ ಬೊಮ್ಮಾಯಿ ಅವರು ಒಂದು ವರ್ಷಕ್ಕೆ ಕಾಲಿಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ಅನಿವಾರ್ಯವಾಗಿ ರಾಜೀನಾಮೆ ನೀಡಿದಾಗ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಪ್ರಬಲ ಜಾತಿಯ ಬೆಂಬಲ, ರಾಜಕೀಯ ಚಾಣಾಕ್ಷತನ, ಆರೆಸ್‍ಎಸ್ ಹಿನ್ನಲೆ […]