ಪರಿಹಾರ ಸಾಮಗ್ರಿಗಳನ್ನು ಹೊತ್ತು ರೋಮಾನಿಯಾಗೆ ತೆರಳಿದ IAF ವಿಮಾನ

ನವದೆಹಲಿ,ಮಾ.2- ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಮಾನವೀಯ ನೆರವು ಹೊತ್ತು ಮುರು ವಾಯುಪಡೆಯ ವಿಮಾನಗಳು ಯುದ್ಧಪೀಡಿತ ನೆರೆ-ಹೊರೆ ರಾಷ್ಟ್ರಗಳಿಗೆ ತೆರಳಿದ್ದು, ಅಲ್ಲಿಂದ ಸುರಕ್ಷಿತವಾಗಿ ಪ್ರಜೆಗಳನ್ನು ಕರೆತರಲಿವೆ. ರಷ್ಯಾ ಆಕ್ರಮಣದ ಬಳಿಕ ಉಕ್ರೇನ್‍ನಲ್ಲಿ ಸಂಘರ್ಷಮಯ ವಾತಾವರಣ ಉಂಟಾಗಿದ್ದು, ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಊಟ, ತಿಂಡಿ, ನೀರು, ಹೊದಿಕೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಹೊರ ಬಂದರೆ ಬಾಂಬ್ ದಾಳಿ, ಒಳಗಿದ್ದರೆ ಹಸಿವಿನ ಸಂಕಟ ಎಂಬ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ವಿದ್ಯಾರ್ಥಿಗಳು ವಿಡಿಯೋ ಮಾಡಿ ತಮ್ಮ […]