‘ಆಪರೇಷನ್ ಗಂಗಾ’ಗೆ ವಾಯು ಸೇನೆ ಸಾಥ್

ನವದೆಹಲಿ,ಮಾ.1- ಯುದ್ಧಪೀಡಿತ ಉಕ್ರೇನ್‍ನಿಂದ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಕಾರ್ಯಾಚರಣೆಗಿಳಿಯುವಂತೆ ಪ್ರಧಾನಿ ನರೇಂದ್ರಮೋದಿ ಭಾರತೀಯ ವಾಯುಸೇನೆಗೆ ಸೂಚನೆ ನೀಡಿದ್ದಾರೆ. ಕಳೆದ ಗುರುವಾರದಿಂದ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದು, ಯುದ್ದ ಆರಂಭವಾಗಿದೆ. ಉಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ವಾಪಸ್ ಕರೆತರಲು ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೂ ಖಾಸಗಿ ವಿಮಾನಗಳನ್ನು ಬಳಕೆ ಮಾಡಿ ಆಪರೇಷನ್ ಗಂಗಾ ನಡೆಸಲಾಗುತ್ತಿದೆ. ಉಕ್ರೇನ್‍ನಲ್ಲಿ ಪರಿಸ್ಥಿತಿ ದಿನೇ ದಿನೇ ವಿಳಂಬ ಮಾಡುವುದು ಅಪಾಯಕಾರಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ವಾಯುಸೇನೆಗೆ ಈ ಸೂಚನೆ ನೀಡಿದ್ದು, […]