ಚೀನಾ ಪ್ರಯಾಣಿರ ನಿರ್ಭಂಧಕ್ಕೆ ಅಪಸ್ವರ

ಬ್ರಸೆಲ್ಸï, ಜ. 5-ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳಿಗೆ ಬರುವ ಚೀನ ಪ್ರಜೆಗಳು ಕೊವಿಡ್- ನೆಗೆಟಿವ್‍ ಪ್ರಮಾಣ ಪತ್ರ ಕಡ್ಡಾಯ ಎಂದು ಕಠಿಣ ನಿರ್ಭಂಧ ಹೇರಲು ಚಿಂತನೆ ಮುಂದುವರೆಸಿದೆ. ಕಳೆದ ಒಂದು ವಾರದಿಂದ ಐರೋಪ್ಯ ಒಕ್ಕೂಟದ ಆರೋಗ್ಯ ತಜ್ಞರ ನಡುವಿನ ಮಾತುಕತೆಯ ನಂತರ, ಇಟಲಿ, ಫ್ರಾನ್ಸ್ ಮತ್ತು ಸ್ಪೇನ್‍ನಂತಹ ದೇಶಗಳು ಈಗಾಗಲೇ ಜಾರಿಗೆ ತಂದ ಪ್ರಯಾಣದ ನಿರ್ಬಂಧವನ್ನು ಎಲ್ಲಾ 27 ಸದಸ್ಯ ರಾಷ್ಟ್ರಗಳು ಪಾಲಿಸಲು ಮುಂದಾಗಿದೆ. ಚೀನಾ ಈ ಕ್ರಮಗಳನ್ನು ತೀವ್ರವಾಗಿ ತಿರಸ್ಕರಿಸಿದೆ ಮತ್ತು ಪ್ರತಿಕ್ರಮದ ಎಚ್ಚರಿಕೆ ನೀಡಿದೆ. […]

ಮಧ್ಯಪ್ರದೇಶದಲ್ಲಿ ಪಠಾಣ್ ಚಿತ್ರ ಬಿಡುಗಡೆ ಅಸಾಧ್ಯ

ಭೋಪಾಲ್,ಡಿ.19-ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಬಗ್ಗೆ ಮಧ್ಯಪ್ರದೇಶದ ವಿಧಾನಸಭೆ ಸಭಾಧ್ಯಕ್ಷ ಗಿರೀಶ್ ಗೌತಮ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಪಠಾಣ್ ಚಿತ್ರವನ್ನು ರಾಜ್ಯದಲ್ಲಿ ನಿಷೇದಿಸಬೇಕು ಎಂಬ ಮಾಡಿದ್ದ ಮನವಿಗೆ ಧನಿಗೂಡಿಸಿರುವ ಸಭಾಧ್ಯಕ್ಷರು ಶಾರುಖ್ ಖಾನ್ ಅವರು ತಮ್ಮ ಪುತ್ರಿಯ ಜೊತೆ ಪಠಾಣ್ ಚಿತ್ರವನ್ನು ವೀಕ್ಷಿಸಬೇಕು ಹಾಗೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಕು ಎಂದು ಸವಾಲು ಹಾಕಿದ್ದಾರೆ. ಇಂದಿನಿಂದ ಆರಂಭವಾಗಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು […]

ಸಿಎಎ ವಿರುದ್ಧ ಸುಪ್ರೀಂ ಮೊರೆ ಹೋದ ಡಿಎಂಕೆ

ನವದೆಹಲಿ,ನ.30- ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ ) 2019 ನಿರಂಕುಶತ್ವದಿಂದ ಕೂಡಿದ್ದು, ಶ್ರೀಲಂಕಾದಿಂದ ವಲಸೆ ಬಂದ ತಮಿಳಿಗರನ್ನು ನಿರ್ಲಕ್ಷಿಸಿದೆ ಎಂದು ಆಕ್ಷೇಪಿಸಿ ಡಿಎಂಕೆ ಸರ್ಕಾರ ಸುಪ್ರೀಂಕೋರ್ಟ್‍ಗೆ ದೂರು ಸಲ್ಲಿಸಿದೆ. 2019ರ ಡಿಸೆಂಬರ್ 11ರಂದು ಸಂಸತ್‍ನಿಂದ ಅಂಗೀಕಾರಗೊಂಡು 2020, ಜನವರಿ 10ರಿಂದ ಜಾರಿಗೆ ತರಲಾದ ಸಿಎಎ ವಿರೋಧಿಸಿ ಸುಮಾರು 220ಕ್ಕೂ ಹೆಚ್ಚು ಅರ್ಜಿಗಳ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇವೆ. ಜೊಂಬಿ ವೈರಾಣು: ವಿಶ್ವಕ್ಕೆ ಗಂಡಾಂತರದ ಸೂಚನೆ ಈಗ ಹೊಸದಾಗಿ ಡಿಎಂಕೆ ಕೂಡ ಮೇಲ್ಮನವಿ ಸಲ್ಲಿಸಿದೆ. ಸಿಎಎ ಮೂಲ ಉದ್ದೇಶ […]

ಆಹಾರ ಪದಾರ್ಥಗಳ ಮೇಲೆ GST ಏರಿಕೆಗೆ ಕೇರಳ ವಿರೋಧ

ತಿರುವನಂತಪುರಂ, ಜು.18- ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಶೇ.5ರಷ್ಟು ಜಿಎಸ್‍ಟಿ ವಿಧಿಸಿರುವುದನ್ನು ಕೇರಳ ಸರ್ಕಾರ ತೀವ್ರವಾಗಿ ವಿರೋಧಿಸಿದೆ. ಗೋದಿ ಹಿಟ್ಟು, ಪನ್ನೀರು, ಮೊಸರಿನಂತಹ ಬ್ರಾಂಡೆಡ್ ಆಹಾರ ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಶೇ.5ರಷ್ಟು ಜಿಎಸ್‍ಟಿ ದರ ವಿಧಿಸಿರುವುದು ಸರಿಯಲ್ಲ ಎಂದು ರಾಜ್ಯದ ಆರ್ಥಿಕ ಸಚಿವ ಕೆ.ಎನ್.ಬಾಲಗೋಪಾಲ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಜನ ಸಾಮಾನ್ಯರಿಗೆ ಹೊರೆಯಾಗುವ ಯಾವುದೇ ತೆರಿಗೆಯನ್ನು ಜಾರಿಗೊಳಿಸಲಾರದು ಎಂದು ಇತ್ತೀಚೆಗೆ ನಡೆದ ಜಿಎಸ್‍ಟಿ ಪರಿಷತ್ ಸಭೆಯಲ್ಲಿ ಕೇರಳ ರಾಜ್ಯ ವಿರೋಧ ಮಾಡಿದೆ ಮತ್ತು ಐಶರಾಮಿ ವಸ್ತುಗಳ […]