ಕಬ್ಬಿಣ, ಅದಿರು ಉತ್ಪಾದನೆಯಲ್ಲಿ ರಾಜ್ಯ ನಂ.1 : ಸಿಎಂ

ಬೆಂಗಳೂರು,ಡಿ.3- ಕರ್ನಾಟಕ ಶೀಘ್ರದಲ್ಲೇ ಕಬ್ಬಿಣ ಮತ್ತು ಅದಿರು ಉತ್ಪಾದನೆಯಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಗಣಿ ಉದ್ಯಮದಲ್ಲಿ ಅವಕಾಶಗಳ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬಳ್ಳಾರಿಯ ಅದಿರು ಮತ್ತು ಕಬ್ಬಿಣ ದೇಶದಲ್ಲೇ ಅತ್ಯುತ್ತಮವಾದ ನೈಸರ್ಗಿಕ ಸಂಪನ್ಮೂಲ ಎಂದು ಬಿಂಬಿತವಾಗಿದೆ. ಹೀಗಾಗಿ ಈ ಉತ್ಪಾದನೆಯಲ್ಲಿ ನಾವು ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.ಗಣಿಗಾರಿಕೆ ಮತ್ತು ಅದಿರು […]