ಆಸ್ಕರ್ ಗೆದ್ದಿರುವುದು ಖುಷಿ ತಂದಿದೆ : ರಾಜಮೌಳಿ

ನವದೆಹಲಿ, ಮಾ. 13- ಮಹೋನ್ನತ RRR ಸಿನಿಮಾದ ನಾಟು ನಾಟು ಗೀತೆಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಲಭಿಸುತ್ತದೆ ಎಂದು ಮೊದಲಿನಿಂದಲೂ ನಿರೀಕ್ಷಿಸಿದ್ದೆವು, ಕೊನೆಗೂ ಹಾಲಿವುಡ್‍ನ ಗೀತೆಗಳಿಗೆ ಪ್ರಬಲ ಪೈಪೋಟಿ ನಡುವೆಯೂ ಆಸ್ಕರ್ ಪ್ರಶಸ್ತಿ ಬಂದಿರುವುದು ತುಂಬಾ ಸಂತಸ ತಂದಿದೆ ಎಂದು ನಿರ್ದೇಶಕ ರಾಜಮೌಳಿ ಸಂತಸ ಹಂಚಿಕೊಂಡಿದ್ದಾರೆ. ನಾಟು ನಾಟು ಗೀತೆಯ ಮೇಕಿಂಗ್ ತುಂಬಾ ಶ್ರೀಮಂತಿಕೆಯಿಂದ ಕೂಡಿದ್ದು ಈ ಗೀತೆಗೆ ವಿಶ್ವದೆಲ್ಲೆಡೆ ಪ್ರಶಂಸೆಗಳ ಸುರಿಮಳೆಯೇ ಹರಿದುಬಂದಿತ್ತು. ಈಗಾಗಲೇ ಈ ಗೀತೆಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದ್ದು, ನಮಗೆ […]

ಆಸ್ಕರ್ ಅಂಗಳದಲ್ಲಿ ಭಾರತೀಯ ಚಿತ್ರಗಳ ಸದ್ದು, ಇಲ್ಲಿದೆ ಪ್ರಶಸ್ತಿಗಳ ಕಂಪ್ಲೀಟ್ ಡೀಟೇಲ್ಸ್

ನವದೆಹಲಿ,ಮಾ.13- ಪ್ರತಿಷ್ಠಿತ ಆಸ್ಕರ್ ಅಕಾಡೆಮಿಯ 95ನೇ ಪ್ರಶಸ್ತಿ ಸಮಾರಂಭಕ್ಕೆ ಕೊನೆಗೂ ತೆರೆಬಿದ್ದಿದ್ದು, ಭಾರತದ ಪ್ರತಿಷ್ಠಿತ ಚಿತ್ರವಾದ ಆರ್‍ಆರ್‍ಆರ್‍ನ ನಾಟೂ ನಾಟೂ ಗೀತೆಗೆ ಹಾಗೂ ದಿ ಎಲಿಫೆಂಟ್ ವಿಸ್ಟರರ್ಸ್ ಸಾಕ್ಷ್ಯ ಚಿತ್ರವು ಮಹೋನ್ನತ ಕಿರೀಟವನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದೆ. ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ಸ್ಲಂ ಡಾಗ್ ಮಿಲೇನೇಯರ್ ಸಿನಿಮಾದ ಜೈಹೋ ಸಿನಿಮಾದ ನಂತರ ಭಾರತದಿಂದ ಹಲವು ಚಿತ್ರಗಳು ಆಸ್ಕರ್‍ಗೆ ಲಗ್ಗೆ ಇಟ್ಟಿದ್ದವಾದರೂ ಮುಕುಟ ಗೆಲ್ಲುವಲ್ಲಿ ಎಡವಿದವು. ಈ ಬಾರಿ ನಾಟು ನಾಟು ಗೀತೆ […]

BIG NEWS : ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಕಾಂತಾರ ಚಿತ್ರ

ಬೆಂಗಳೂರು,ಜ.10- ಭಾರತೀಯ ಚಿತ್ರೋದ್ಯಮದಲ್ಲಿ ಸಂಚಲನ ಮೂಡಿಸಿದ್ದ ಕಾಂತಾರ ಕನ್ನಡ ಸಿನಿಮಾ ಚಿತ್ರರಂಗ ಅಂತಾರಾಷ್ಟ್ರೀಯ ಅತ್ಯುನ್ನತ ಪ್ರಶಸ್ತಿ ಆಸ್ಕರ್‍ಗೆ ಮೊದಲ ಹಂತದಲ್ಲಿ ನಾಮನಿರ್ದೇಶನಗೊಂಡಿದೆ. ಉತ್ತಮ ಚಿತ್ರ ಹಾಗೂ ಉತ್ತಮ ನಟ ಎಂಬ ಎರಡು ವಿಭಾಗದಲ್ಲಿ ಕಾಂತಾರ ನಾಮನಿರ್ದೇಶನಗೊಂಡಿದೆ ಎಂದು ಚಿತ್ರ ನಿರ್ಮಿಸಿದ ಸಂಸ್ಥೆ ಹೊಂಬಾಳೆ ತಿಳಿಸಿದೆ. ಕಾಂತಾರ ಎರಡು ಅರ್ಹತೆಗಳನ್ನು ಪಡೆದುಕೊಂಡಿದೆ. ನಮ್ಮನ್ನು ಬೆಂಬಲಿಸಿದ್ದ ಎಲ್ಲರಿಗೂ ಹೃದಯ ತುಂಬಿದ ಧನ್ಯವಾದ ಎಂದು ಸಂಸ್ಥೆ ಹೇಳಿದ್ದು, ನಿಮ್ಮ ಬೆಂಬಲದೊಂದಿಗೆ ಈ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಆಸ್ಕರ್‍ನಲ್ಲಿ ಕಾಂತಾರ, ರಿಷಬ್‍ಶೆಟ್ಟಿ ಅವರು […]