ಸ್ವಿಸ್ ಓಪನ್ ಪ್ರೀ ಕ್ವಾರ್ಟರ್ ಫೈನಲ್‍ನಲ್ಲಿ ಸಿಂಧುಗೆ ಮುಖಭಂಗ

ಬಸೆಲ್ (ಸ್ವಿಡ್ಜ ರ್ಲೆಂಡ್), ಮಾ. 24- ಇಲ್ಲಿ ನಡೆಯುತ್ತಿ ರುವ ಸ್ವಿಸ್ ಓಪನ್ ಪ್ರೀ ಕ್ವಾರ್ಟರ್ ಫೈನಲ್‍ನಲ್ಲಿ ಪಿ.ವಿ.ಸಿಂಧು ಸೋಲುವ ಮೂಲಕ ಅಭಿಯಾನ ಮುಗಿಸಿದ್ದಾರೆ. ಪುರುಷರ ವಿಭಾಗದಲ್ಲಿ ಖ್ಯಾತ ಬ್ಯಾಡ್ಮಿಂಟನ್ ತಾರೆಗಳಾದ ಕಿಡಂಬಿ ಶ್ರೀಕಾಂತ್ ಅವರು ಕೂಡ ಸೋತು ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿಕೊಂಡಿದ್ದಾರೆ. ಪ್ರೀ ಕ್ವಾರ್ಟರ್‍ಫೈನಲ್‍ನಲ್ಲಿ 2 ಬಾರಿ ಒಲಿಂಪಿಕ್ಸ್ ಪದಕ ವಿಜೇತೆ , ಹಾಲಿ ಚಾಂಪಿಯನ್ ಪಿ.ವಿ.ಸಿಂಧು ಅವರು ಇಂಡೋನೇಷ್ಯಾದ ಪುಟ್ರಿ ಕುಸುಮ ವಿರುದ್ಧ ನಡೆದ 16 ನೇರ ಒಡೆತಗಳಲ್ಲಿ ಗೆಲ್ಲುವಲ್ಲಿ ಎಡವಿದರು. ಮೊದಲ […]

ಮಹಿಳೆಯ ಹೃದಯ ಬಗೆದು ಬೇಯಿಸಿ ತಿಂದಿದ್ದ ನರಭಕ್ಷಕನಿಗೆ ಜಿವಾವಧಿ ಶಿಕ್ಷೆ

ವಾಷಿಂಗ್ಟನ್,ಮಾ.17- ಮಹಿಳೆಯೊಬ್ಬರನ್ನು ಕೊಂದು ಆಕೆಯ ಹೃದಯ ಕತ್ತರಿಸಿ ಹೊರ ತೆಗೆಯುವುದರ ಜತೆಗೆ ನಾಲ್ಕು ವರ್ಷದ ಮಗು ಸೇರಿದಂತೆ ಇಬ್ಬರನ್ನು ಕೊಂದಿದ್ದ ಭಯಾನಕ ವ್ಯಕ್ತಿಗೆ ಅಮೆರಿಕದ ಒಕ್ಲಹೋಮ ರಾಜ್ಯದಲ್ಲಿ ಜಿವಾವಧಿ ಶಿಕ್ಷೆ ವಿಧಿಸಲಾಗಿದೆ. 44 ವರ್ಷದ ಲಾರೆನ್ಸ್ ಪಾಲ್ ಆಂಡರ್ಸನ್ ಜಿವಾವ ಶಿಕ್ಷೆಗೆ ಗುರಿಯಾಗಿರುವ ನರಹಂತಕ. ಈತ 2021 ರಲ್ಲಿ ಕೊಲೆ ಮಾಡಿ ಜೈಲು ಸೇರಿದ್ದ ಅಲ್ಲಿಂದ ಬಿಡುಗಡೆಯಾದ ನಂತರ ಆತ ಆಂಡ್ರಿಯಾ ಎಂಬಾಕೆಯ ಹತ್ಯೆ ಮಾಡಿ ಆಕೆಯ ಹೃದಯ ಹೊರ ತೆಗೆದಿದ್ದ. ಬಹುಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಭಾರಿ […]

ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ ಸ್ಟಾಲಿನ್

ಚೆನ್ನೈ,ಮಾ.11- ಪ್ರಮುಖ ಮಸೂದೆಗಳಿತೆ ಸಹಿ ಹಾಕಲು ಸತಾಯಿಸುತ್ತಿರುವ ತಮಿಳುನಾಡು ರಾಜ್ಯಪಾಲ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ. ನೀಟ್ ವಿನಾಯ್ತಿ ನೀಡುವುದು ಹಾಗೂ ಆನ್‍ಲೈನ್ ರಮ್ಮಿ ನಿಷೇಧ ಸೇರಿದಂತೆ ಪ್ರಮುಖ ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲ ಆರ್.ಎನ್.ರವಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಅವರು ಕಿಡಿ ಕಾರಿದ್ದಾರೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲï) 75 ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿಎಂಕೆ ಅಧ್ಯಕ್ಷರು ತಮ್ಮ ದಿವಂಗತ ತಂದೆ ಮತ್ತು […]

ಟೆಸ್ಟ್ ನಿಂದ ಡೇವಿಡ್ ವಾರ್ನರ್ ಔಟ್

ನವದೆಹಲಿ, ಫೆ. 21- ಭಾರತ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಅವರು ಬಾರ್ಡರ್- ಗವಾಸ್ಕರ್ ಸಂಪೂರ್ಣ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ವೇಳೆ ಡೇವಿಡ್ ವಾರ್ನರ್ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್‍ನಲ್ಲಿ ಮೊಣಕೈಗೆ ಗಾಯ ಮಾಡಿಕೊಂಡಿದ್ದ ವಾರ್ನರ್, ಮತ್ತೊಬ್ಬ ವೇಗಿ ಮೊಹಮ್ಮದ ಶಮಿ ಎಸೆತದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಿ ದ್ದರು. […]

ಮಾದಕವಸ್ತುಗಳ ವಿರುದ್ಧ ಸಿಬಿಐ ಸಂಘಟನಾತ್ಮಕ ಸಮರ

ನವದೆಹಲಿ,ಸೆ.29- ಸಾಮಾಜಿಕ ಪಿಡುಗಾಗಿರುವ ಮಾದಕವಸ್ತುಗಳ ವಿರುದ್ಧ ಸಮರ ಸಾರಿರುವ ಸಿಬಿಐ ಇಂದು ದೇಶಾದ್ಯಂತ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದು, ಅಪಾರ ಪ್ರಮಾಣದ ಸರಕ್ಕನ್ನು ವಶಪಡಿಸಿಕೊಂಡು 175ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದೆ. ರಾಷ್ಟ್ರೀಯ ಮಾದಕವಸ್ತುಗಳ ನಿಗ್ರಹ ದಳದೊಂದಿಗೆ ಸಿಬಿಐ ಜಂಟಿ ಕಾರ್ಯಾಚರಣೆ ನಡೆಸಿದೆ. ಪಂಜಾಬ್, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಮಣಿಪುರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದಿಢೀರ್ ದಾಳಿ ನಡೆಸಲಾಗಿದೆ. ಆಪರೇಷನ್ ಗರುಡಾ ಹೆಸರಿನ ಈ ಕಾರ್ಯಾಚರಣೆಗೆ ಕಳೆದ ಒಂದು ವಾರದಿಂದ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಇಂಟರ್‍ಪೆಪೋಲ್‍ನ […]