ನಿಷೇಧಿತ ಸಿಮಿ ಸಂಘಟನೆಯ ಮುಖವಾಡವೇ ಪಿಎಫ್‍ಐ

ನವದೆಹಲಿ,ಸೆ.28- ಯಾರೂ ಕೂಡ ನಿರೀಕ್ಷೆ ಮಾಡದ ರೀತಿಯಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಅಂಗಸಂಸ್ಥೆಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಬಲವಾದ ಕಾರಣಗಳನ್ನು ನೀಡಿದೆ. ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಸಿಮಿ ಸಂಘಟನೆಗೆ ನಿಷೇಧ ಹೇರಲಾಗಿತ್ತು. ನಂತರ ಅದರ ಮತ್ತೊಂದು ಮುಖವಾಡವೇ ಪಿಎಫ್‍ಐ ಎಂಬುದು ಹಲವರ ಆರೋಪವಾಗಿತ್ತು. ಸರಿಸುಮಾರು ಒಂದು ದಶಕದಿಂದ ಈ ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಅನೇಕ ರಾಜ್ಯ ಸರ್ಕಾರಗಳು ಕೇಂದ್ರದ ಮೇಲೆ ಒತ್ತಡ […]