ಭಾರತದಲ್ಲಿ ಶೇ.75ರಷ್ಟು ವಯಸ್ಕರಿಗೆ ಕೋವಿಡ್ ಲಸಿಕೆ : ಮೋದಿ ಶ್ಲಾಘನೆ

ನವದೆಹಲಿ, ಜ.30- ಭಾರತದಲ್ಲಿ ಶೇ.75ಕ್ಕೂ ಅಕ ವಯಸ್ಕರಿಗೆ ಕೋವಿಡ್ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ನಾಗರಿಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಇದು ಒಂದು ಗಣನೀಯ ಸಾಧನೆಯಾಗಿದ್ದು, ಲಸಿಕೆ ಅಭಿಯಾನ ಯಶಸ್ವಿಯಾಗಲು ಸಹಕರಿಸಿದ ಎಲ್ಲರ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಪ್ರಧಾನಿ ಹೇಳಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಟ್ವಿಟ್‍ಅನ್ನು ಟ್ಯಾಗ್ ಮಾಡಿದ್ದಾರೆ. ದೇಶದಲ್ಲಿ ನೀಡಲಾಗಿರುವ ಕೋವಿಡ್-19 ಲಸಿಕೆ ಡೋಸ್‍ಗಳ ಪ್ರಮಾಣ ಇಲ್ಲಿಯತನಕ 165.70 ಕೋಟಿ ದಾಟಿದೆ.