ಕಾಶ್ಮೀರ ತ್ಯೇಕವಾದಕ್ಕೆ ಬೆಂಬಲಿಸಿದ ಆರೋಪದಲ್ಲಿ ಬಿಟ್ಟಾ ಪತ್ನಿ ಸೇರಿ ನಾಲ್ವರು ಸರ್ಕಾರಿ ಅಧಿಕಾರಿಗಳು ಸಸ್ಪೆಂಡ್
ಶ್ರೀನಗರ,ಆ.13-ಪ್ರತ್ಯೇಕವಾದಕ್ಕೆ ಬೆಂಬಲ ನೀಡಿರುವ ಆರೋಪಕ್ಕಾಗಿ ನಾಲ್ವರು ಸರ್ಕಾರಿ ಹಿರಿಯ ಅಧಿಕಾರಿಗಳನ್ನು ಜಮ್ಮುಕಾಶ್ಮೀರ ಆಡಳಿತ ವಜಾಗೊಳಿಸಿದೆ. ನಿಷೇತ ಹಿಜ್ಬುಲ್ ಮುಜಾಯಿದ್ದೀನ್ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾಲುದ್ದೀನ್ ಅವರ ಪುತ್ರ ಸಯ್ಯದ್ ಅಬುಲ್ ಮುಹೀದ್ ಅವರು ಮಾಹಿತಿ ತಂತ್ರಜ್ಞಾನ ಇಲಾಖೆಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ತಂದೆ ಉಗ್ರ ಸಂಘಟನೆಯ ಮುಖ್ಯಸ್ಥರಾಗಿರುವುದರಿಂದ ಪುತ್ರನನ್ನು ವಜಾಗೊಳಿಸಲಾಗಿದೆ. ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಒಳಗಾಗಿ ಬಂಧನಕ್ಕೊಳಗಾಗಿರುವ ಫಾರೂಕ್ ಅಹಮ್ಮದ್ ದಾರ್ ಅಲಿಯಾಸ್ ಬಿಟ್ಟಾಕರಾಟೆ ಅವರ ಪತ್ನಿ ಅಶಬಾ-ಉಲ್- ಅರ್ಜಾಮಂದ್ ಅವರು ಜಮ್ಮುಕಾಶ್ಮೀರ […]