ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವತ್ತ ಭಾರತ ದಾಪುಗಾಲು

ನವದೆಹಲಿ,ಜ.19- ಹಲವು ದಶಕಗಳಿಂದಲೂ ಜನಸಂಖ್ಯೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಚೀನಾವನ್ನು ಹಿಂದುಕ್ಕುವ ನಿಟ್ಟಿನಲ್ಲಿ ಭಾರತ ಮುನ್ನುಗ್ಗುತ್ತಿದ್ದು, ಶೀಘ್ರವೇ ವಿಶ್ವದಲ್ಲಿ ಮೊದಲ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಾಗಿದೆ. ನಿನ್ನೆಯವರಿಗಿನ ಅಂಕಿ ಅಂಶಗಳ ಪ್ರಕಾರ ಚೀನಾ ಮತ್ತು ಭಾರತದ ನಡುವಿನ ಜನಸಂಖ್ಯೆಯ ನಡುವೆ 3.89 ಕೋಟಿ ಮಾತ್ರ ವ್ಯತ್ಯಾಸವಿದೆ. ಚೀನಾ 145 ಕೋಟಿ ಜನರನ್ನು ಹೊಂದಿದ್ದರೆ, ಭಾರತ 141 ಕೋಟಿ ಜನಸಂಖ್ಯೆ ಹೊಂದಿದೆ. ಕಳೆದೆರಡು ವರ್ಷಗಳಲ್ಲಿ ಇದ್ದ 5.93 ಕೋಟಿ ಜನಸಂಖ್ಯೆಯ ಅಂತರ ಗಣನೀಯವಾಗಿ ತಗ್ಗಿ ಹೋಗಿದೆ. 1995ರಿಂದಲೂ ಅಲ್ಲಿನ ಸರ್ಕಾರ […]