ಪದ್ಮ ಪುರಸ್ಕೃತರಿಗೆ ಅಭಿನಂದನೆ

ಬೆಂಗಳೂರು,ಫೆ.13- ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೇರಿದಂತೆ ಪದ್ಮ ಪ್ರಶಸ್ತಿಗೆ ಭಾಜನರಾದ ಗಣ್ಯರಿಗೆ ವಿಧಾನಸಭೆಯಲ್ಲಿಂದು ಅಭಿನಂದನೆ ಸಲ್ಲಿಸಲಾಯಿತು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪದ್ಮವಿಭೂಷಣ ಪ್ರಶಸ್ತಿಗೆಮಾಜಿ ರಾಜ್ಯಪಾಲರಾದ ಎಸ್.ಎಂ.ಕೃಷ್ಣ, ಪದ್ಮಭೂಷಣ ಪ್ರಶಸ್ತಿಗೆ ಸಾಹಿತಿ ಎಸ್.ಎಲ್.ಭೈರಪ್ಪ, ಇನೋಸೆಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಜಾನಪದ ಕಲಾವಿದರಾದ ಖಾದರ್ ವಲಿ, ಡಾ.ಸುಬ್ಬರಾಮನ್ಸೇರಿದಂತೆ ಪದ್ಮ ಪ್ರಶಸ್ತಿಗೆ ಭಾಜನರಾದವರಿಗೆ ಸದನ ಅಭಿನಂದನೆ ಸಲ್ಲಿಸುತ್ತದೆ ಎಂದಾಗ ಪಕ್ಷ ಬೇಧ ಮರೆತು ಸದನದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. #PadmaAwardWinners, #SMKrishna, #InfosysSudhamurthy,